ಅಪ್ಪ ಮಕ್ಕಳಿಂದ ತುಮಕೂರು ನಗರ ಲೂಟಿ ,ಸಿಬಿಐ ತನಿಖೆಗೆ ಒತ್ತಾಯಿಸಿದ ಮಾಜಿ ಸಚಿವ ಸೋಗಡ ಶಿವಣ್ಣ
ತುಮಕೂರು -ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ತುಮಕೂರು ಸ್ಮಾರ್ಟ್ ಸಿಟಿಗೆ ಕೋಟ್ಯಂತರ ರೂಪಾಯಿ ಹಣ ಬಂದಿದ್ದು ಬಂದ ಹಣವನ್ನು ಸರಿಯಾಗಿ ಸದ್ಬಳಕೆ ಮಾಡದೆ ಬೇಕಾಬಿಟ್ಟಿ ಕಾಮಗಾರಿ ನಡೆಸಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸುವ ಮೂಲಕ ಹಾಗೂ ಸಂಸದರು ವ್ಯಾಪಕ ಭ್ರಷ್ಟಾಚಾರವನ್ನು ಮಾಡಿದ್ದಾರೆ ಈ ಮೂಲಕ ತುಮಕೂರು ನಗರದ ಸೌಂದರ್ಯವನ್ನು ಹಾಳು ಮಾಡಿದ್ದಾರೆ ಎಂದು ಮಾಜಿ ಸಚಿವ ಸೋಗಡು ಶಿವಣ್ಣ ತಿಳಿಸಿದ್ದಾರೆ.
ತುಮಕೂರು ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿ ಗೋಷ್ಠಿ ನಡೆಸಿದ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ಮಾತನಾಡುತ್ತಾ ತುಮಕೂರು ನಗರದಲ್ಲಿ ಹಿಂದೆಂದೂ ಕಾಣದಂತ ವ್ಯಾಪಕ ಭ್ರಷ್ಟಾಚಾರವನ್ನು ಹಾಲಿ ಶಾಸಕರು ಮಾಡಿದ್ದು ಇದಕ್ಕೆ ಸಂಬಂಧಿಸಿದಂತೆ ತುಮಕೂರು ನಗರದಲ್ಲಿ ನಿರ್ವಹಿಸಲಾಗಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ .
ಇನ್ನು ತಾವು ಈ ಬಾರಿಯ ಚುನಾವಣೆಗೆ ನಿಂತಿದ್ದು ಇದು ನನ್ನ ಕೊನೆ ಚುನಾವಣೆ ಆಗಿದ್ದು ತುಮಕೂರು ನಗರದ ದಕ್ಷ ಆಡಳಿತಕ್ಕಾಗಿ ತಮ್ಮನ್ನು ಬೆಂಬಲಿಸಬೇಕು ಎಂದು ನಗರದ ಮತದಾರರಿಗೆ ಮಾಧ್ಯಮಗಳ ಮೂಲಕ ಕೋರುತ್ತಿದ್ದೇನೆ ಎಂದ ಅವರು ನನ್ನ ಸ್ಪರ್ಧೆ ಜನರ ಹಿತಕ್ಕಾಗಿ, ಜಾತ್ಯತೀತ ಸ್ಪರ್ಧೆ ಎಂದು ಹೇಳಿದರು.
ಸ್ಮಾರ್ಟ್ ಸಿಟಿಯ ಅವ್ಯವಹಾರ ಹಾಗೂ ಈ ಕುರಿತು ಮುಂದಿನ ದಿನಗಳಲ್ಲಿ ಸಿ ಬಿ ಐ ತನಿಖೆ ನಡೆಸಲು ಹೋರಾಟ ಮಾಡುತ್ತೇನೆ ಎಂದರು. 120 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ರಿಂಗ್ ರಸ್ತೆ ಕಳಪೆ ಗುಣಮಟ್ಟದ್ದು ಎಂದರು. ನೆನ್ನೆ ರಾತ್ರಿ ಸುರಿದ ಮಳೆಗೆ ತುಮಕೂರು ನಗರದ ಎಲ್ಲಾ ರಸ್ತೆಗಳು ನೀರು ಸಾರಾಗವಾಗಿ ಸಾಗದೆ ರಸ್ತೆಯಲ್ಲಿಯೇ ನೀರು ನಿಂತು ಗಬ್ಬುನಾರುತ್ತಿದೆ ಈ ವಿಷಯ ಜನ ಸಾಮಾನ್ಯರಿಗೆ ತಿಳಿದಿದೆ ಈ ರೀತಿಯಾದ ಅವ್ಯವಸ್ಥೆಯಲ್ಲೂ ಅಪ್ಪ ಮಕ್ಕಳು ತುಮಕೂರು ಸ್ಮಾರ್ಟ್ ಸಿಟಿ ಎಂದು ಕರೆಯುತ್ತಾರೆ ಎಲ್ಲಿದೆ ನಿಮ್ಮ ಸ್ಮಾರ್ಟ್ ಸಿಟಿ ಎಂದು ಪ್ರಶ್ನೆ ಹಾಕಿದರು.
ನಾನು ಬಸವಣ್ಣ, ನಡೆದಾಡುತ್ತಿದ್ದ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶಯಗಳಂತೆ ನಡೆದುಕೊಂಡು ಬಂದಿದ್ದೇನೆ ಭ್ರಷ್ಟಾಚಾರ ರಹಿತ, ಸ್ವಜನ ಪಕ್ಷ ಪಾತ ಮಾಡದೆ ರಾಜಕೀಯ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.
ಇತ್ತೀಚಿಗೆ ತುಮಕೂರು ನಗರ ಮತ್ತು ಗ್ರಾಮಂತರ ಭಾಗಗಳಲ್ಲಿ ನಡೆದ ರೋಡ್ ಷೋಗಳಲ್ಲಿ ಬೇರೆ ಜಿಲ್ಲೆಗಳಿಂದ ಜನರನ್ನು ಕರೆದುಕೊಂಡು ಬಂದಿದ್ದಾರೆ ಇದನ್ನು ಗಮನಿಸಿದರೆ ಗೊತ್ತಾಗುತ್ತೆ ಈ ಭಾರಿ ಬಿಜೆಪಿಗೆ ಪಕ್ಷಕ್ಕೆ ಒಲವು ಇಲ್ಲ ಎಂದು ಗೊತ್ತಾಗುತ್ತೆ ಎಂದು ಹೇಳಿದರು.
ನಾನು ಚುನಾವಣೆ ಪ್ರಚಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಜನರು ಉತ್ತಮವಾದ ಪ್ರತಿಕ್ರಿಯೆ ನೀಡುತ್ತಿದ್ದಾರೆ ಈ ಭಾರಿ ಜನರ ಒಲವು ನನ್ನ ಮೇಲಿದೆ ಎಂಬ ಅತೀವ ವಿಶ್ವಾಸವಿದೆ ಎಂದರು ನಮ್ಮ ಕಾರ್ಯಕರ್ತರು ಮನೆ ಮನೆಗೆ ಪ್ರಚಾರ ಮಾಡಿ ಜನರಲ್ಲಿ ಜಾಗೃತಿ ಹುಟ್ಟಿಸಿರುವುದಲ್ಲದೆ ಜನರಿಗೆ ಅರಿವಾಗಿದೆ ತಮ್ಮಗೆ ಎಂತ ವ್ಯಕ್ತಿ ಬೇಕು ಎನ್ನುವುದು ಈ ಭಾರಿ ಜನ ನನ್ನನ್ನು ಅತೀ ಹೆಚ್ಚಿನ ಅಂತರದಲ್ಲಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸೊಗಡು ಶಿವಣ್ಣ, ಕೆ ಪಿ ಮಹೇಶ್, ಧನಿಯಾ ಕುಮಾರ್, ಜಯಸಿಂಹ, ಗೋವಿಂದರಾಜು, ಮಹಾಲಿಂಗಯ್ಯ, ಸಂಜಯ್ ನಾಯಕ್, ಶಾಂತರಾಜು, ಗೋಕುಲ್ ಮಂಜುನಾಥ್ ಹಾಗೂ ಇತರರು ಭಾಗವಹಿಸಿದ್ದರು.