ಗುಬ್ಬಿ ಜೆಡಿಎಸ್ ನ ಭದ್ರಕೋಟೆ , ಮಾಜಿ ಶಾಸಕ ಬರೀ ಎಲೆಕ್ಷನ್ ಶಾಸಕ – ಗುಬ್ಬಿ ಜೆಡಿಎಸ್ ಅಭ್ಯರ್ಥಿ ಬಿ ಎಸ್ ನಾಗರಾಜ್

ಗುಬ್ಬಿ ಜೆಡಿಎಸ್ ನ ಭದ್ರಕೋಟೆ , ಮಾಜಿ ಶಾಸಕ ಬರೀ ಎಲೆಕ್ಷನ್ ಶಾಸಕ – ಗುಬ್ಬಿ ಜೆಡಿಎಸ್ ಅಭ್ಯರ್ಥಿ ಬಿ ಎಸ್ ನಾಗರಾಜ್.

 

 

ತುಮಕೂರು – ಗುಬ್ಬಿ ಕ್ಷೇತ್ರ ಜೆಡಿಎಸ್ ಪಕ್ಷದ ಭದ್ರಕೋಟೆ ಇನ್ನು ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಗಳಾದ ಸ್ತ್ರೀಶಕ್ತಿ ಸಾಲ ಮನ್ನಾ, ರೈತರ ಸಾಲ ಮನ್ನಾ,ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಸೇರಿದಂತೆ ಎಕರೆಗೆ 10000 ಘೋಷಣೆ ಇವೆಲ್ಲವೂ ಪಕ್ಷದ ಉತ್ತಮ ಯೋಜನೆಗಳಾಗಿವೆ ಈ ಪಂಚ ರತ್ನ ಯೋಜನೆ, ಜೆಡಿಎಸ್ ಪಕ್ಷವನ್ನ ಅಧಿಕಾರಕ್ಕೆ ತರಲು ಸಹಕಾರಿಯಾಗಲಿದೆ ಎಂದರು.

 

 

 

 

ಇನ್ನು ಗುಬ್ಬಿ ತಾಲೂಕು ಹೆಚ್ಚಾಗಿ ರೈತಾಪಿ ವರ್ಗ ಇರುವ ತಾಲೂಕಾಗಿದ್ದು ಈಗ ಇರುವ ಎರಡು ರಾಷ್ಟ್ರೀಯ ಪಕ್ಷಗಳು ಜಿಎಸ್​ಟಿ ತೆರಿಗೆ, ಗ್ಯಾಸ್ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ ,ಜಾತಿ ಮಧ್ಯೆ ದ್ವೇಷ ಹರಡಿದ್ದೆ ರಾಷ್ಟ್ರೀಯ ಪಕ್ಷಗಳ ಸಾಧನೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ತಿರುಚುವ ಕೆಲಸ ಒಂದು ಕಡೆಯಾದರೆ ಸುಳ್ಳು ಹೇಳುತ್ತಾ ಮತ್ತೊಂದು ಪಕ್ಷ ಮೋಸ ಮಾಡುತ್ತಾ ಅಧಿಕಾರ ನಡೆಸುತ್ತಿದೆ ಹಾಗಾಗಿ ಇದರಿಂದ ಬೇಸತ್ತಿರುವ ಸಾಮಾನ್ಯ ಜನಕ್ಕೆ ಈ ಎಲ್ಲಾ ನ್ಯೂನ್ಯತೆಗಳು ಜೆಡಿಎಸ್ ಪಕ್ಷಕ್ಕೆ ಈ ಬಾರಿ ವರದಾನವಾಗಲಿದೆ ಎಂದರು.

 

 

 

20 ವರ್ಷದ ಶಾಸಕರಿಂದ ಗುಬ್ಬಿ ಕ್ಷೇತ್ರ ಅಭಿವೃದ್ಧಿಯಾಗಿಲ್ಲ.

ಕಳೆದ 20 ವರ್ಷದಿಂದ ಗುಬ್ಬಿ ತಾಲೂಕಿನಲ್ಲಿ ಆಡಳಿತ ನಡೆಸುತ್ತಿದ್ದ ಶಾಸಕರಿಂದ ಗುಬ್ಬಿ ತಾಲೂಕು ಅಭಿವೃದ್ಧಿಯಾಗದೆ ಹಿಂದುಳಿದಿದ್ದು ಹಿಂದಿನ ಶಾಸಕರು ಅಭಿವೃದ್ಧಿಯ ಶಾಸಕರಾಗದೆ ಬರಿ ಎಲೆಕ್ಷನ್ ಶಾಸಕರಾಗಿದ್ದೆ ಅವರ ಸಾಧನೆ ಕೇವಲ ಎಲೆಕ್ಷನ್ ಸಮಯದಲ್ಲಿ ಆಮಿಷ ಒಡ್ಡಿ ಅಧಿಕಾರದ ಗದ್ದುಗೆ ಏರಿದ ನಂತರ ಕ್ಷೇತ್ರದ ಕಡೆ ತಿರುಗಿ ನೋಡದೆ ಇರುವುದರಿಂದ ಗುಬ್ಬಿ ತಾಲೂಕು ಇದುವರೆಗೂ ಹಿಂದುಳಿದಿದೆ ಎಂದು ಪರೋಕ್ಷವಾಗಿ ಮಾಜಿ ಶಾಸಕರ ಮೇಲೆ ವಾಗ್ದಾಳಿ ನಡೆಸಿದರು.

 

 

 

 

ಇನ್ನು ಗುಬ್ಬಿ ತಾಲೂಕಿನಲ್ಲಿ ಬಿಜೆಪಿ ಪಕ್ಷ ಕೇವಲ ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡುತ್ತಾ ಕಾಲಹರಣ ಮಾಡಿದ್ದು ಇದರಿಂದ ಬೇಸತ್ತಿರುವ ತಾಲೂಕಿನ ಹಿರಿಯ ಮುಖಂಡರುಗಳಾದ ಬೆಟ್ಟಸ್ವಾಮಿ ಹಾಗೂ ಹೊನ್ನಗಿರಿ ಗೌಡರ ತಂಡ ನಮ್ಮ ಜೊತೆ ಸೇರಿದ್ದು ನಮಗೆ ಮತ್ತಷ್ಟು ಹೆಚ್ಚಿನ ಬಲ ಸಿಕ್ಕಂತಾಗಿದೆ ಎಂದರು.

 

 

ತಾಲೂಕಿನಲ್ಲಿ ಇಬ್ಬರು ನಾಯಕರನ್ನ ಬಳಸಿಕೊಂಡು ಪಕ್ಷ ಕಟ್ಟಿದ್ದು ಅವರು ಶ್ರಮವಹಿಸಿ ಕೆಲಸ ಮಾಡಿದ್ದರು ಸಹ ಎರಡು ಪಕ್ಷಗಳು ಅವರಿಗೆ ದ್ರೋಹ ಮಾಡಿದ್ದು ಈಗ ನಮ್ಮ ಪಕ್ಷ ಸೇರುವುದರಿಂದ ನಮಗೆ ನಮಗೆ ಮತ್ತಷ್ಟು ಹೆಚ್ಚಿನ ಶಕ್ತಿ ಬಂದಿದ್ದು ಡಬಲ್ ಇಂಜಿನ್ ಶಕ್ತಿ ಸಿಕ್ಕಿದ್ದು ಈ ಬಾರಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಲು ಈ ಇಬ್ಬರು ನಾಯಕರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದರು.

 

 

 

 

ತಾಲೂಕಿಗೆ ಶಾಸಕ ಬೇಕಿಲ್ಲ ಕೆಲಸಗಾರ ಬೇಕು

ಗುಬ್ಬಿ ತಾಲೂಕಿಗೆ ಕೇವಲ ಅಧಿಕಾರ ನಡೆಸುವ ಶಾಸಕನ ಅಗತ್ಯವಿಲ್ಲ ಕ್ಷೇತ್ರದ ಅಭಿವೃದ್ಧಿ ಹಾಗೂ ನೊಂದವರ ಕಷ್ಟ ನಷ್ಟಗಳಿಗೆ ಸ್ಪಂದಿಸುವ ಕೆಲಸಗಾರನ ಅವಶ್ಯಕತೆ ಇದ್ದು ನಾನು ಸಹ ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದು ಈ ಬಾರಿ ಹೆಚ್ಚಿನ ಮತಗಳ ಅಂತರದಲ್ಲಿ ಕ್ಷೇತ್ರದ ಜನತೆ ನನ್ನನ್ನ ಆಶೀರ್ವದಿಸಲಿದ್ದಾರೆ ಎಂದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!