ಪ್ರಧಾನಿ ನರೇಂದ್ರ ಮೋದಿ ದೂಷಿಸಿರುವ ಮಲ್ಲಿಕಾರ್ಜುನ್ ಖರ್ಗೆ ನಾಲಾಯಕ್ ಎಂದು ಕ್ಷೇತ್ರದ ಜನತೆ ತಿರಸ್ಕರಿಸಿದ್ದಾರೆ – ನಳಿನ್ ಕುಮಾರ್ ಕಟೀಲ್.
ತುಮಕೂರು – ವಿಶ್ವವೇ ಮೆಚ್ಚಿದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ರವರನ್ನು ಕಾಂಗ್ರೆಸ್ ನಾಯಕರು ವಿಷದ ಹಾವು ಎನ್ನುವ ಕೆಟ್ಟ ನಡವಳಿಕೆಯನ್ನು ಕಾಂಗ್ರೆಸ್ ಮುಖಂಡರು ಅನುಸರಿಸುತ್ತಿದ್ದಾರೆ ಹಾಗೂ ಪ್ರಧಾನಿ ನರೇಂದ್ರ ಮೋದಿ ರವರನ್ನ ವಿಷದ ಸರ್ಪ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ರವರನ್ನು ಈಗಾಗಲೇ ಕ್ಷೇತ್ರದ ಜನತೆ ನಾಲಾಯಕ್ ಎಂದು ತಿರಸ್ಕರಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ತುಮಕೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು ಬಿಜೆಪಿ ಪಕ್ಷದಿಂದ ಪ್ರಜಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ ಇನ್ನು ನಮ್ಮ ಪಕ್ಷದ ಪ್ರಣಾಳಿಕೆ ಪಾರ್ಟಿ ಪ್ರಣಾಳಿಕೆ ಗಿಂತ ಪ್ರಜಾ ಪ್ರಣಾಳಿಕೆ ಆಗಬೇಕಿದೆ ಎಂದರು.
ಜನರಿಂದ ಸಾಮಾಜಿಕ ಜಾಲತಾಣ ಮೂಲಕ ಅಭಿಪ್ರಾಯವನ್ನು ಸಂಗ್ರಹ ಮಾಡಿದ್ದು ಲಕ್ಷಾಂತರ ಸಾರ್ವಜನಿಕರ ಸಲಹೆ ಸ್ವೀಕರಿಸಿ ಕ್ರೂರೀಕರಣ ಮಾಡಿ ಪ್ರಣಾಳಿಕೆ ಸಿದ್ಧಪಡಿಸಿದ್ದು ಅನ್ನ, ಅಕ್ಷರ ,ಅಭಯ ಎಂಬ ಆರು ಅಂಶಗಳನ್ನು ಒಳಗೊಂಡಂತೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ ಎಂದರು.
ಇನ್ನು ಬಿಜೆಪಿಯ ಪ್ರಣಾಳಿಕೆಯಲ್ಲಿ ಮೂರು ಪ್ರಮುಖ ಹಬ್ಬಗಳಿಗೆ ಮೂರು ಗ್ಯಾಸ್ ಸಿಲಿಂಡರ್ ಅನ್ನು ಉಚಿತವಾಗಿ ನೀಡುವ ಕಾರ್ಯಕ್ರಮವನ್ನು ಪರಿಚಯಿಸಿದ್ದು ಕರ್ನಾಟಕ ವಿಕಾಸ ಎಂಬ ಜನರ ಭಾವನೆ ಅಡಿ ಪ್ರಣಾಳಿಕೆ ತಯಾರು ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ಗೆ ಗ್ಯಾರಂಟಿ ಇಲ್ಲ ಹಾಗಾಗಿ ಗ್ಯಾರಂಟಿ ಕಾರ್ಡ್ ಕೊಡುತ್ತಿದೆ ರಾಜ್ಯದಲ್ಲಿ ಸಿದ್ದರಾಮಯ್ಯ ಪರಮೇಶ್ವರ್ ಡಿ.ಕೆ ಶಿವಕುಮಾರ್ ಗೆ ಸೋಲಿನ ಭೀತಿ ಎದುರಾಗಿದೆ ಹಾಗಾಗಿ ಕಾಂಗ್ರೆಸ್ ನಾಯಕರು ಚಂಚಲರಾಗಿದ್ದಾರೆ .
ಪ್ರಧಾನಿ ನರೇಂದ್ರ ಮೋದಿ ರವರನ್ನ ದೂಷಿಸಿರುವ ಕಾಂಗ್ರೆಸ್ ಕರ್ನಾಟಕ ರಾಜ್ಯದಲ್ಲಿ ಮುಕ್ತವಾಗಲಿದೆ ಚುನಾವಣೆಯಲ್ಲಿ ಹೋರಾಟ ಮಾಡುವ ಶಕ್ತಿ ಕಳೆದುಕೊಂಡಿದೆ ಹಾಗೆ ಸಿದ್ದುಗೆ ಸೋಲಿನ ಭಯ ಡಿಕೆಶಿಗೆ ಕಾನೂನಿನ ಭಯ ಕಾಡತೊಡಗಿದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೊಂದಲದ ಗೂಡಲ್ಲಿ ಸಿಲುಕಿದೆ ಎಂದರು.
ಇನ್ನು ರಾಜ್ಯದಲ್ಲಿ ಅಮಿತ್ ಶಾ ಮೋದಿ ರಾಲಿ ಇವೆಲ್ಲವನ್ನೂ ಗಮನಿಸಿದಾಗ ಹಳೆ ಮೈಸೂರು ಭಾಗದಲ್ಲಿ ಹಿನ್ನಡೆ ಇದ್ದ ಬಿಜೆಪಿ ಪಕ್ಷಕ್ಕೆ ಈ ಬಾರಿ ಬದಲಾವಣೆ ಕಂಡಿದೆ ರಾಜ್ಯದಲ್ಲಿ ಬಹುತೇಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಇರುವುದು ನಿಶ್ಚಿತ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಹೋರಾಡಿದವರೆಲ್ಲ ಸೋಲಿನ ಭೀತಿಯಲ್ಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ ರವರನ್ನ ವಿಷದ ಸರ್ಪ ಎಂದಿರುವ
ಮಲ್ಲಿಕಾರ್ಜುನ್ ಖರ್ಗೆ ರವರನ್ನ ಕ್ಷೇತ್ರದ ಜನತೆ ನಾಲಾಯಕ್ ಎಂದು ಜನರೇ ತಿರಸ್ಕರಿಸಿದ್ದಾರೆ ಯುದ್ಧದ ಮುಂಚೆಯೇ ಶಸ್ತ್ರಗಳನ್ನು ಕಾಂಗ್ರೆಸ್ ನಾಯಕರು ಒಪ್ಪಿಸಿದ್ದಾರೆ ಹಾಗಾಗಿ ಕಾಂಗ್ರೆಸ್ ಪಕ್ಷದ ನಾಯಕರು ಸಂಪೂರ್ಣ ಗೊಂದಲದಲ್ಲಿ ಸಿಲುಕಿ ಮಾತಾಡುತ್ತಿದ್ದಾರೆ ಎಂದರು.