ತ್ರಿಮೂರ್ತಿಗಳ ಬೆಂಬಲ ಪ್ರೀತನ್ ನಾಗಪ್ಪಗೆ ಆನೆಬಲ ಈ ಬಾರಿ ಒಲಿಯಲಿದೆಯೇ ಜಯಮಾಲೆ ??
ಹನೂರು :-ವಿಧಾನಸಭಾ ಕ್ಷೆತ್ರದಲ್ಲಿ ಬಿಜೆಪಿ ಟಿಕೆಟ್ ಘೋಷಣೆಗೂ ಮುನ್ನ ಇದ್ದಂತ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಸಿಗಳು ಪ್ರಭಾವಿ ನಾಯಕರುಗಳು ಹನೂರು ಬಿಜೆಪಿ ಟಿಕೆಟ್ ಘೋಷಣೆ ಆದ ಮೇಲೆ ಕೆಲ ದಿನಗಳು ಬಿಜೆಪಿ ಕಾರ್ಯಕ್ರಮಗಳಿಗೆ ಗೈರಾಗಿದ್ದು ಬಾರಿ ಸಂಚಲನ ಉಂಟು ಮಾಡಿತ್ತು ವೆಂಕಟೇಶ್ ದತ್ತೆಶ್ ರವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂಬ ಗಾಳಿ ಸುದ್ದಿ ಕೇಳಿಬರುತಿತ್ತು ಇದೀಗ ಹನೂರು ಬಿಜೆಪಿ ಪಕ್ಷದ ಮುಖಂಡರುಗಳಾದ
ವೆಂಕಟೇಶ್. ನಿಶಾಂತ್. ದತ್ತೆಶ್ ರವರು ಇಂದು ಹನೂರು ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ ನಾವು ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗಿಲ್ಲ ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರೀತನ್ ನಾಗಪ್ಪ ಪರ ನಾವಿದ್ದೇವೆ ಕ್ಷೆತ್ರದ ಅಭಿವೃದ್ಧಿಗಾಗಿ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ನಾವು ದುಡಿಯುತ್ತೇವೆ
ಹನೂರು ಕ್ಷೆತ್ರದಲ್ಲಿ ಬಿಜೆಪಿಯನ್ನು ಈ ಬಾರಿ ಗೆದ್ದೇ ಗೆಲ್ಲಿಸುತ್ತೇವೆ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದೆ ಈ ಬಾರಿ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಪೂರ್ಣವಾದ ಬಹುಮತ ಬಂದೆ ಬರುತ್ತೆ
ನಮ್ಮ ಚಾಮರಾಜನಗರದಲ್ಲಿ ನಾಲ್ಕಕ್ಕೆ ನಾಲ್ಕು ಕ್ಷೆತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ನಾವೆಲ್ಲ ಒಗ್ಗಟ್ಟಾಗಿ ಇದ್ದೇವೆ ಎಂದು ವೆಂಕಟೇಶ್ ದತ್ತೆಶ್ ನಿಶಾಂತ್ ಸ್ಪಷ್ಟನೆ ನೀಡಿದ್ದಾರೆ ಮೂವರು ಬಿಜೆಪಿ ಮುಖಂಡರ ಆಗಮನದಿಂದ ಬಿಜೆಪಿ ಪಾಳಯದಲ್ಲಿ ನಗೆ ಬೀರಿದೆ
ಇನ್ನು ಈ ಸಂದರ್ಭದಲ್ಲಿ ಬಿಹಾರ್ ಎಮ್ ಎಲ್ ಸಿ ದಿಲೀಪ್ ಜೈಸ್ವಾಲ್ .ರಾಷ್ಟ್ರೀಯ ಒಬಿಸಿ ಕಾರ್ಯದರ್ಶಿ ನೂರೊಂದು ಶೆಟ್ಟರು, ರಾಜ್ಯ ಒಬಿಸಿ ಕಾರ್ಯಕಾರಿಣಿ ಸದಸ್ಯ ಜನಧ್ವನಿ ವೆಂಕಟೇಶ್ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದತ್ತೆಶ್ ಹನೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿ ಬೂದುಬಾಳು ವೆಂಕಟಸ್ವಾಮಿ, ಹನೂರು ಮಂಡಲ ಅಧ್ಯಕ್ಷ ಸಿದ್ದಪ್ಪ, ರಾಜ್ಯ ಪ್ರಧಾನ ಮಾಧ್ಯಮ ಸಂಚಾಲಕ ಬಿ.ಕೆ. ಶಿವಕುಮಾರ್, ಹನೂರು ಮಾಧ್ಯಮ ಸಂಚಾಲಕ ಕಾಮಗೆರೆ ಮಧು, ಪ್ರವಾಸ ಪ್ರಮುಖ ವೃಷಭೇಂದ್ರ ಸ್ವಾಮಿ ಮತ್ತಿತರರು ಇದ್ದರು.
ವರದಿ :- ನಾಗೇಂದ್ರ ಪ್ರಸಾದ್