ಬಿಜೆಪಿ ಅಭ್ಯರ್ಥಿ ಸುರೇಶ್ ಗೌಡ ರವರ ಪರವಾಗಿ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರಿಂದ ರೋಡ್ ಶೋ

ಬಿಜೆಪಿ ಅಭ್ಯರ್ಥಿ ಸುರೇಶ್ ಗೌಡ ರವರ ಪರವಾಗಿ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರಿಂದ ರೋಡ್ ಶೋ

 

 

 

 

 

 

 

 

 

ತುಮಕೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಬಿ. ಸುರೇಶ ಗೌಡರವರ ಪರವಾಗಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಕೈದಾಳ ಹಾಗೂ ಹೆತ್ತೇನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಮತ ಯಾಚನೆ ಮಾಡಿದರು.

 

 

 

 

 

 

 

 

 

 

ಇನ್ನು ತುಮಕೂರು ತಾಲೂಕು, ಗುಳೂರು ಹೋಬಳಿಯ ಕೈದಾಳ ಗ್ರಾಮಕ್ಕೆ ಆಗಮಿಸಿದ ನಳಿನ್ ಕುಮಾರ್ ಕಟೀಲ್ ರವರಿಗೆ ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತ ನೀಡಲಾಯಿತು.

 

 

 

 

 

 

 

 

 

 

ಇದೆ ವೇಳೆ ಇತಿಹಾಸ ಪ್ರಸಿದ್ಧ ಕೈದಾಳ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ ಅವರು ಪೂಜೆ ಸಲ್ಲಿಸಿ ರೋಡ್ ಶೋಗೆ ಚಾಲನೆ ನೀಡಿ ಮಾತನಾಡಿದ ಅವರು ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಅನುದಾನ ತಂದು ಉತ್ತಮ ಕೆಲಸಗಳನ್ನು ನಿರ್ವಹಿಸಿದ ಕೀರ್ತಿ ಸುರೇಶ್ ಗೌಡರವರಿಗೆ ಸಲ್ಲುತ್ತದೆ ಆದರೆ ಕೆಲವರ ಮೋಸದ ಆಟಕ್ಕೆ ಬಲಿಯಾದ ಸುರೇಶ್ ಗೌಡರವರು ಕೊನೆಯ ಚುನಾವಣೆಯಲ್ಲಿ ಸೋಲನ್ನು ಅನುಭವಿಸುವಂತ್ಹಾಯಿತು . ಇನ್ನಾದರೂ ತುಮಕೂರು ಗ್ರಾಮಾಂತರ ಕ್ಷೇತ್ರದ ಮತದಾರರು ಸುರೇಶ್ ಗೌಡರವರಿಗೆ ಹೆಚ್ಚಿನ ಮತಗಳನ್ನು ನೀಡಿ ಜಯಶೀಲರನ್ನಾಗಿ ಮಾಡುವ ಮೂಲಕ ಬಿಜೆಪಿ ಪಕ್ಷವನ್ನ ಕ್ಷೇತ್ರದಲ್ಲಿ ಗಟ್ಟಿಗೊಳಿಸುವ ಮೂಲಕ ಸುರೇಶ್ ಗೌಡರ ಕೈ ಬಲಪಡಿಸಬೇಕು ಆ ಮೂಲಕ ನರೇಂದ್ರ ಮೋದಿ ರವರ ಕೈ ಬಲಪಡಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

 

 

 

 

ಇನ್ನು ದೇಶಾದ್ಯಂತ ಕೊರೋನಾ ರಣಕೇಕೆ ಹಾಕುತ್ತಿದ್ದ ವೇಳೆ ಸಾರ್ವಜನಿಕರ ಹಾಗೂ ಕ್ಷೇತ್ರದ ಮತದಾರರ ನೆರವಿಗೆ ಬಂದದ್ದು ಸುರೇಶ್ ಗೌಡ ಇನ್ನು ಸಾರ್ವಜನಿಕರು ಸಂಕಷ್ಟದಲ್ಲಿದ್ದ ವೇಳೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರು ಮತದಾರರ ಹಾಗೂ ಕ್ಷೇತ್ರದ ಜನರ ಸಂಕಷ್ಟಕ್ಕೆ ಮುಂದಾಗದೆ ವಿದೇಶಕ್ಕೆ ಪ್ರವಾಸ ಹೋಗಿದ್ದರು ಎಂದ ಅವರು ನಕಲಿ ಬಾಂಡ್ ಮೂಲಕ ವಾಮ ಮಾರ್ಗದಲ್ಲಿ ಗೆದ್ದು ಕ್ಷೇತ್ರದ ಮತದಾರರಿಗೆ ಅನ್ಯಾಯ ಮಾಡಿದ್ದಾರೆ ಎಂದು ನಾವಾಗಲೀ ಸುರೇಶ್ ಗೌಡ ಆಗಲಿ ಹೇಳಿದ್ದಲ್ಲ ಇದು ನ್ಯಾಯಾಲಯವೇ ಹೇಳಿದೆ ಹಾಗಾಗಿ ಜನತಾ ನ್ಯಾಯಾಲಯದಲ್ಲೂ ಸಹ ಹಾಲಿ ಶಾಸಕರನ್ನ ಮನೆಗೆ ಕಳಿಸಿ ಸುರೇಶ್ ಗೌಡರವರನ್ನ ಬೆಂಬಲಿಸಿ ಶಾಸಕರನ್ನಾಗಿ ಆಯ್ಕೆ ಮಾಡುವುದು ಕ್ಷೇತ್ರದ ಮತದಾರರ ಜವಾಬ್ದಾರಿ ಹಾಗಾಗಿ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಬಿ ಸುರೇಶ್ ಗೌಡ ರವರಿಗೆ ಜಯ ತಂದುಕೊಡಬೇಕು ಎಂದರು.

 

 

 

 

 

 

 

ಇನ್ನು ರೋಡ್ ಶೋ ವೇಳೆ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ ಗೌಡ,ಮಾಜಿ ಸಂಸದ ಮುದ್ದಹನುಮೇಗೌಡ, ನೇ ಲ ನರೇಂದ್ರಬಾಬು, ತುಮಕೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಹೆಬ್ಬಾಕ ರವಿ ಸೇರಿದಂತೆ ಸ್ಥಳೀಯ ಮುಖಂಡರು ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!