ಕೃಷ್ಣಕುಮಾರ್ ಗೆ ಮತ ಹಾಕಲು ಮತದಾರರರು ಮುಂದಾಗಿದ್ದಾರೆ – ಡಿ ಕೃಷ್ಣಕುಮಾರ್.
ತುಮಕೂರು – ಈ ಬಾರಿ ಚುನಾವಣೆಗೆ ತಮಗೆ ಮತ ಹಾಕಲು ಕುಣಿಗಲ್ ಕ್ಷೇತ್ರದ ಮತದಾರರು ಮುಂದಾಗಿದ್ದಾರೆ ಇನ್ನು ಮೂರು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು ಈ ಬಾರಿಯ ಮತದಾರರ ಒಲವು ಬಿಜೆಪಿ ಪಕ್ಷದ ಪರವಾಗಿದೆ. ಎಂದು ಕುಣಿಗಲ್ ಕ್ಷೇತ್ರದ ಅಭ್ಯರ್ಥಿ ಡಿ.ಕೃಷ್ಣಕುಮಾರ್ ತಿಳಿಸಿದ್ದಾರೆ.
ಇದುವರೆಗೂ ತಾವು ಕುಣಿಗಲ್ ಕ್ಷೇತ್ರದ ಮತದಾರರ ಮನಸ್ಸನ್ನ ಗೆಲ್ಲುವಲ್ಲಿ ಸಫಲರಾಗಿದ್ದು ಇದುವರೆಗೂ ಕ್ಷೇತ್ರದ 1.8 ಲಕ್ಷ ಮತದಾರರನ್ನು ಮನೆಮನೆಗೆ ಭೇಟಿ ನೀಡಿ ಮತದಾರರನ್ನು ಬೇಟಿ ಮಾಡಿದ್ದೇವೆ ಎಂದರು.
ಇನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ರವರ ಕೈ ಬಲಪಡಿಸಿ 2024ಕ್ಕೆ ದೇಶಕ್ಕೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ರವರು ಪ್ರಧಾನಿ ಮಾಡುವ ನಿಟ್ಟಿನಲ್ಲಿ ನಮ್ಮ ಕ್ಷೇತ್ರದ ಮತದಾರರು ಸಹ ಮುಂದಾಗಿದ್ದಾರೆ ಎಂದರು.
ಬಂಡಾಯದ ಬಿಸಿ ಬಿಜೆಪಿ ಪಕ್ಷಕ್ಕೆ ತಟ್ಟುವುದಿಲ್ಲ.
ಇನ್ನು ಬಿಜೆಪಿ ಪಕ್ಷಕ್ಕೆ ಯಾವುದೇ ಬಂಡಾಯದ ಬಿಸಿ ತಟ್ಟುವುದಿಲ್ಲ ಇನ್ನು ಟಿಕೆಟ್ ಆಕಾಂಕ್ಷಿಗಳಾದ ಮುದ್ದಹನುಮೇಗೌಡ ಹಾಗೂ ರಾಜೇಶ್ ಗೌಡ ಸಹ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಬಿ ಫಾರಂ ತಮಗೆ ತಲುಪಿದ್ದು ಈ ಬಾರಿಯ ಚುನಾವಣೆಗೆ ಮಾಜಿ ಸಂಸದ ಮುದ್ದಹನುಮೆ ಗೌಡ ರವರು ತಮಗೆ ಬೆಂಬಲ ಸೂಚಿಸಿದ್ದು ರಾಜೇಶ್ ಗೌಡ ಸಹ ತಮಗೆ ಬೆಂಬಲ ಸೂಚಿಸಲಿದ್ದಾರೆ ಎಂದರು.
ಒಳ ರಾಜಕಾರಣಕ್ಕೆ ಮನ್ನಣೆ ನೀಡಲ್ಲ.
ತಾವು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದು ಕಳೆದ ಬಾರಿ ಚುನಾವಣೆಯಲ್ಲಿ ಸಹ ನಮ್ಮ ಸೋದರ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದರು ಅಂದು ಸಹ ಚುನಾವಣೆಗೆ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದೆ ಆದರೆ ಯಾವುದೇ ಕಾರಣಕ್ಕೂ ಒಳ ರಾಜಕಾರಣಕ್ಕೆ ತಾವು ಮಣೆ ಹಾಕುವುದಿಲ್ಲ ಚುನಾವಣೆಯ ನಿರ್ಧಾರವನ್ನು ಮತದಾರರು ಮಾಡಲಿದ್ದಾರೆ ತಮ್ಮ ಕುಟುಂಬ ವರ್ಗದವರು ಬೇರೆ ಪಕ್ಷದಿಂದ ಸ್ಪರ್ಧೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ನಾವು ಯಾವುದೇ ಕಾರಣಕ್ಕೂ ಒಳ ರಾಜಕಾರಣಕ್ಕೆ ಮುಂದಾಗುವುದಿಲ್ಲ ನಾನು ಯಾವತ್ತೂ ಕರ್ಣ ಆಗಲು ಇಷ್ಟಪಡುವುದಿಲ್ಲ ಎಂದರು.
ಮುದ್ದಹನುಮೇಗೌಡರ ಸೇರ್ಪಡೆ ಪಕ್ಷಕ್ಕೆ ಬಲ ತಂದಿದೆ.
ಕುಣಿಗಲ್ ಕ್ಷೇತ್ರದ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಂಸದ ಮುದ್ದಹನುವೇ ಗೌಡ ರವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಮತ್ತಷ್ಟು ಬಲ ತಂದಿದ್ದು ಈ ಬಾರಿಯ ಚುನಾವಣೆಗೆ ಗೆಲ್ಲುವ ನಿಟ್ಟಿನಲ್ಲಿ ಮುದ್ದಹನುವೇಗೌಡರು ಸಂಪೂರ್ಣವಾಗಿ ಸಹಕಾರ ನೀಡಲಿದ್ದಾರೆ ಎಂದರು.
ಇನ್ನು ಮುದ್ದಹನುಮೆಗೌಡರಿಗೆ ಟಿಕೆಟ್ ಕೈತಪ್ಪಿರುವ ಬೇಸರ ಇದೆ ಆದರೆ ಅವರೇ ಹೇಳಿದಂತೆ ಪಕ್ಷದ ಅಭ್ಯರ್ಥಿಯ ಗೆಲುವಿಗೆ ತಾವು ಸಂಪೂರ್ಣ ಸಹಕಾರ ನೀಡಲಿದ್ದೇವೆ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ ಹಾಗಾಗಿ ಯಾವುದೇ ಕಾರಣಕ್ಕೂ ಗೊಂದಲ ಸೃಷ್ಟಿಯಾಗುವುದಿಲ್ಲ ಮುದ್ದಹನುಮೇಗೌಡರು ನಮ್ಮೊಂದಿಗೆ ಇದು ಪಕ್ಷದ ಗೆಲುವಿಗೆ ಸಹಕರಿಸಲಿದ್ದಾರೆ ಎಂದರು.
ವರದಿ ಮಾರುತಿ ಪ್ರಸಾದ್ ತುಮಕೂರು