ವಿಶ್ವದ ಇಂಜಿನಿಯರಿಂಗ್ ಅದ್ಭುತವನ್ನು ಸೃಷ್ಟಿಸುತ್ತಿದೆ ಭಾರತ ಸರ್ಕಾರ! ಐಫೆಲ್ ಟವರ್ ಗಿಂತಲೂ ಎತ್ತರದ ಸೇತುವೆ ನರ್ಮಾಣ.. ಕೆಲವೇ ದಿನಗಳಲ್ಲಿ ಉದ್ಘಾಟನೆ…
ಚೆನಾಬ್ ನದಿಯ ಮೇಲಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆ ಮತ್ತೊಂದು ಎಂಜಿನಿಯರಿಂಗ್ ಮೈಲಿಗಲ್ಲು ತಲುಪಲಿದೆ. ಚೆನಾಬ್ ಸೇತುವೆಯ ಉಕ್ಕಿನ ಕಮಾನು ಪೂರ್ಣಗೊಳ್ಳುವ ಹಂತಕ್ಕೆ ತಲುಪಿದ್ದು ಭಾರತೀಯ ರೈಲ್ವೆ ಮತ್ತೊಂದು ಎಂಜಿನಿಯರಿಂಗ್ ಮೈಲಿಗಲ್ಲು ಸಾಧಿಸುವ ಹಾದಿಯಲ್ಲಿದೆ. ಇದು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾಗಲು ಸಜ್ಜಾಗಿದೆ. ಈ ವರ್ಷ ಮಾರ್ಚ್ ಕೊನೆಯಲ್ಲಿ ಸೇತುವೆ ಪೂರ್ಣವಾಗಲಿದೆ. 111 ಕಿ.ಮೀ ಉದ್ದದ ಚೆನಾಬ್ ಸೇತುವೆಯನ್ನು ನಿರ್ಮಿಸಲಾಗುತ್ತಿದೆ.
ಇದು ರೈಲ್ವೆ ಮೂಲಕ ಕಣಿವೆ ಪ್ರದೇಶಗಳನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುತ್ತದೆ. ರೈಲ್ವೆ ಅಧಿಕಾರಿಗಳ ಪ್ರಕಾರ ಚೆನಾಬ್ ಸೇತುವೆಯನ್ನು ಚೆನಾಬ್ ನದಿಯ ಮಟ್ಟದಿಂದ 359 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗುತ್ತಿದೆ ಮತ್ತು ಐಫೆಲ್ ಟವರ್ಗಿಂತ 35 ಮೀಟರ್ ಎತ್ತರವಿದೆ (ಇದು 324 ಮೀಟರ್ ಎತ್ತರವನ್ನು ಹೊಂದಿದೆ)