ಒಂಬತ್ತನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ
ಚಾಮರಾಜನಗರ :- ಇಡೀ ವಿಶ್ವವೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇಂದು ಆಚರಿಸುತ್ತಿದೆ. ಮೊಟ್ಟ ಮೊದಲ ಬಾರಿಗೆ 2015 ನೇ ಇಸ್ವಿಯ ಜೂನ್ 21ರಂದು ಚೊಚ್ಚಲ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗಿತ್ತು.
ಅದರಂತೆ ಚಾಮರಾಜನಗರ ಜಿಲ್ಲೆಯದ್ಯಂತ ಸರ್ಕಾರಿ ಕಚೇರಿಗಳು ಶಾಲಾ-ಕಾಲೇಜುಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಣೆ ಮಾಡಿದ್ದಾರೆ.ಮನುಷ್ಯನ ದೈಹಿಕ ಹಾಗೂ ಮಾನಸಿಕ ಉನ್ನತಿಗಾಗಿ ಯೋಗಾಭ್ಯಾಸ ಮಾಡುವುದು ತುಂಬಾ ಉಪಯೋಗಕಾರಿಯಾಗಿದೆ. ಕೊಳ್ಳೇಗಾಲ ತಾಲೂಕಿನ ದೊಡ್ಡಿoದುವಾದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನದಂದು ಮಕ್ಕಳಿಗೆ ಶಿಕ್ಷಕರುಗಳು ಜೊತೆಗೂಡಿ ಯೋಗಾಭ್ಯಾಸ ಮಾಡಿಸಿ ಯೋಗ ದಿನ ಆಚರಣೆ ಮಾಡಿದ್ದಾರೆ. ಜೊತೆಗೆ ಕೊಳ್ಳೇಗಾಲ ತಾಲೂಕಿನಲ್ಲೇ ಸುಮಾರು 330 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಶಾಲೆ ಎಂಬ ಹೆಗ್ಗಳಿಕೆಗೆ ದೊಡ್ಡಿoದುವಾದಿ ಸರ್ಕಾರಿ ಪ್ರಾಥಮಿಕ ಶಾಲೆ ಹೆಸರುವಾಸಿಯಾಗಿದೆ.
ವರದಿ :- ನಾಗೇಂದ್ರ ಪ್ರಸಾದ್