ಬಲೂನಿಗೆ ಗಾಳಿ ತುಂಬಿಸುವ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ನಾಲ್ವರು ಸಾವು:10ಮಂದಿಗೆ ಗಂಭೀರ ಗಾಯ

ಬಲೂನಿಗೆ ಗಾಳಿ ತುಂಬಿಸುವ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ನಾಲ್ವರು ಸಾವು:10ಮಂದಿಗೆ ಗಂಭೀರ ಗಾಯ

ಭೋಪಾಲ್/ ಲಕ್ನೋ: ಬಲೂನಿಗೆ ಗಾಳಿ ತುಂಬಿಸುವ ಗ್ಯಾಸ್ ಸಿಲಿಂಡರ್ ಸ್ಫೋಟವಾದ ಎರಡು ಪ್ರತ್ಯೇಕ ಘಟನೆಗಳು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ನಡೆದಿದೆ.

 

ಮಧ್ಯಪ್ರದೇಶದ ಚಿಂದ್ವಾರ ಮತ್ತು ಉತ್ತರ ಪ್ರದೇಶದ ವಾರಣಾಸಿಯಲ್ಲಿ ರವಿವಾರ ಈ ಘಟನೆಗಳು ನಡೆದಿದೆ.

 

ಎರಡು ಪ್ರಕರಣಗಳಲ್ಲಿ ಒಟ್ಟು ನಾಲ್ವರು ಮೃತಪಟ್ಟಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ.

ಚಿಂದ್ವಾರ ಪ್ರಕರಣದಲ್ಲಿ ತೇಜುದ್ದೀನ್ ಅನ್ಸಾರಿ (40 ವ) ಮತ್ತು ಶೇಕ್ ಇಸ್ಮಾಯಿಲ್ (70 ವ) ಮೃತಪಟ್ಟರೆ, ವಾರಣಾಸಿಯಲ್ಲಿ ಗೀತಾ ದೇವಿ (40 ವ) ಮತ್ತು ಲಲ್ಲಾ (30ವ ) ಸಾವನ್ನಪ್ಪಿದ್ದಾರೆ.

 

ಗಾಯಾಳುಗಳಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಂದ್ವಾರ ಪ್ರಕರಣದಲ್ಲಿ ಸ್ಫೋಟದ ಶಬ್ಧ ಸುಮಾರು ದೂರದವರೆಗೆ ಕೇಳಿಸಿದ್ದು, ಕಂಪನದ ಅನುಭವವಾಗಿದೆ ಎನ್ನಲಾಗಿದೆ.

ಬಲೂನ್ ಮಾರಾಟಗಾರ ಬಲೂನುಗಳಲ್ಲಿ ಗ್ಯಾಸ್ ತುಂಬುತ್ತಿದ್ದಾಗ ಈ ಭಯಾನಕ ಘಟನೆ ನಡೆದಿದೆ. ಸ್ಫೋಟದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದರು ಆದರೆ ಅವರು ಇನ್ನೂ ಅಧಿಕೃತ ಹೇಳಿಕೆ ನೀಡಲಿಲ್ಲ.

Leave a Reply

Your email address will not be published. Required fields are marked *

You cannot copy content of this page

error: Content is protected !!