ಬರೋಬ್ಬರಿ ‘2’ ಕೆಜಿ ಚಿನ್ನದ ಬಿಸ್ಕೆಟ್ ತಂದು ಸಿಕ್ಕಿಬಿದ್ದ ಆಸಾಮಿ!!!
ವಾಸ್ಕೋ: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕೆಟ್ಗಳನ್ನ ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನ ಇಲ್ಲಿನ ದಾಬೋಲಿಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ 45 ವರ್ಷದ ಅಲಿ ಅಕ್ಬರ್ ಅಬೂಬಕ್ಕರ್ ದುಬೈನಿಂದ ದಾಬೋಲಿಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಆತನಿಂದ ಬರೋಬ್ಬರಿ 2.1 ಕೆ.ಜಿ.ಯಷ್ಟು ಚಿನ್ನದ ಬಿಸ್ಕೆಟ್ ಗಟ್ಟಿಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಆದಾಯ ಗುಪ್ತಚರ ನಿರ್ದೇಶನಾಲಯ ಪ್ರಕಟಣೆ ಹೊರಡಿಸಿದೆ.
ಆರೋಪಿ ಅಕ್ಬರ್ ಅಬೂಬಕರ್ನನ್ನು ವಶಕ್ಕೆ ಪಡೆದ ಅಧಿಕಾರಿಗಳಿಗೆ ಆತನ ಬಳಿ ಸುಮಾರು 18 ಚಿನ್ನದ ಗಟ್ಟಿಗಳು ಪತ್ತೆಯಾಗಿವೆ. ಸದ್ಯ ಪತ್ತೆಯಾಗಿರುವ ಚಿನ್ನದ ಮೌಲ್ಯ 97 ಲಕ್ಷ ರೂಪಾಯಿ ಆಗಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಗೆ ಮುಂದುವರೆಸಿದ್ದಾರೆ.