ವರುಣ ಕ್ಷೇತ್ರದಲ್ಲಿ ಬೀದಿಗೆ ಬಿದ್ದಿರುವ ವಿಕಲಚೇತನ ಸಹೋದರಿಯರು.
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮನಕಲಕುವಂತಿರುವ ವಿಕಲಚೇತನ ಸಹೋದರಿಯರ ಹೀನಾಯ ಬದುಕು , ಆದರೂ ಅವರ ಬಗ್ಗೆ ಕಿಂಚಿತ್ತೂ ಕಾಳಜಿ ಇದು ವರೆಗೂ ಯಾರೊಬ್ಬರೂ ತೋರಿಸದೆ ಇರುವುದು ಅವಮಾನಕರ ಸಂಗತಿ.
ಹೌದು ಮೈಸೂರು ಜಿಲ್ಲೆಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಪರ್ಧೆ ಮಾಡಿರುವ ವರುಣ ಕ್ಷೇತ್ರದಲ್ಲಿ ಅಕ್ಷರಶಃ ಬೀದಿಗೆ ಬಿದ್ದಿರುವ ವಿಕಲಚೇತನ ಸಹೋದರಿಯರನ್ನು ನೋಡಿದರೆ ಎಂತವರ ಮನ ಕಲಕದೆ ಇರದು…
ಸೂರಿಗಾಗಿ ಕಣ್ಣೀರಿಡುತ್ತಿರುವ ವಿಕಲಚೇತನ ಸಹೋದರಿಯರು.
ಮರುಕ ಹುಟ್ಟಿಸುವ ವಿಕಲಚೇತನ ಸಹೋದರಿಯರ ಪರಿಸ್ಥಿತಿ ಮಳೆಗಾಳಿಗೆ ಕುಸಿದುಬಿದ್ದ ಮಣ್ಣಿನಗೋಡೆ ಪರಿಣಾಮ
ಕಳೆದ ಹದಿನೈದು ವರ್ಷಗಳಿಂದ ಸ್ವಂತಸೂರಿಗಾಗಿ ಪರಿಪರಿಯಾಗಿ ಬೇಡುತ್ತಿರುವ ಬಡಕುಟುಂಬ ಕೂಗು ಯಾರೊಬ್ಬರಿಗೂ ಕಿವಿಗೆ ಬಿದ್ದಂತಿಲ್ಲ
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಆಲಂಬೂರು ಗ್ರಾಮದಲ್ಲಿ ಸೂರಿಲ್ಲದ ಕುಟುಂಬಕ್ಕೆ ಆಶ್ರಯ ನೀಡಿರುವುದು ನೆರೆ ಹೊರೆಯವರು,
೧೫ ವರ್ಷಗಳ ಹಿಂದೆ ತಂದೆಯನ್ನ ಕಳೆದುಕೊಂಡ ನತದೃಷ್ಟ ವಿಕಲಚೇತನ ಸಹೋದರಿಯರು,ವೃದ್ದೆ ತಾಯಿಯ ಪೋಷಣೆಯಲ್ಲಿ ಕಾಲದೂಡುತ್ತಿದ್ದಾರೆ
ಕಾಲುಗಳ ಸ್ವಾಧೀನವಿಲ್ಲದೆ ಕೈಗಳ ಸಹಾಯದಿಂದ ಮುಂದೆ ಸಾಗುವ ೩೫ ವರ್ಷದ ಲಕ್ಷ್ಮಿ ಹಾಗೂ ೩೨ ವರ್ಷದ ದೀಪು.
ಕೂಲಿ ಮಾಡಿ ವಿಕಲಚೇತನ ಮಕ್ಕಳನ್ನ ಪೋಷಿಸುತ್ತಿರುವ ತಾಯಿಯ ಕಷ್ಟ ಹೇಳತೀರದ್ದಾಗಿದೆ…
ಹುಟ್ಟಿನಿಂದಲೂ ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಸಹೋದರಿಯರು ಸ್ವಂತ ಸೂರಿಗಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಕಾಡಿಬೇಡಿದರು ಯಾರೊಬ್ಬರೂ ಇತ್ತ ಗಮನ ಹರಿಸಿಲ್ಲ..
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸಿರುವ ಕ್ಷೇತ್ರದ ಕುಟುಂಬವೊಂದರ ಹೀನಾಯ ಬದುಕು..
ಇನ್ನಾದರೂ ಈ ವಿಕಲಚೇತನ ಸಹೋದರಿಯರ ಮನವಿಗೆ ಸ್ಪಂದಿಸುವರೇ ಅಧಿಕಾರಿಗಳು…?ಕಣ್ಣೀರು ಒರೆಸುವರೇ ಜನಪ್ರತಿನಿದಿ ಗಳು..?ಕಾದು ನೋಡಬೇಕಿದೆ.