ಪಂಚಮಸಾಲಿ ಸಮುದಾಯಕ್ಕೆ 2A ಮೀಸಲು ಕಲ್ಪಿಸಿದರೆ ಆತ್ಮಹತ್ಯೆಯೊಂದೇ ದಾರಿ_ಮಾಜಿ ಎಂ.ಎಸ್ಸಿ ಪುಟ್ಟಸಿದ್ದಶೆಟ್ಟಿ.

ಪಂಚಮಸಾಲಿ ಸಮುದಾಯಕ್ಕೆ 2A ಮೀಸಲು ಕಲ್ಪಿಸಿದರೆ ಆತ್ಮಹತ್ಯೆಯೊಂದೇ ದಾರಿ_ಮಾಜಿ ಎಂ.ಎಸ್ಸಿ ಪುಟ್ಟರಂಗಶೆಟ್ಟಿ.

 

 

 

ತುಮಕೂರು_ಪಂಚಮಸಾಲಿ ಸಮುದಾಯಕ್ಕೆ 2A ಮೀಸಲು ಕಲ್ಪಿಸಿದರೆ ಕಾಯಕ ಸಮಾಜದವರು ಮುಖ್ಯಮಂತ್ರಿ ಮನೆ ಮುಂದೆ ಆತ್ಮಹತ್ಯೆ ಹಾದಿ ತುಳಿಯಬೇಕಾಗುತ್ತದೆ ಎಂದು ಮಾಜಿ ಎಂಎಲ್ಸಿ ಕೆ.ಸಿ ಪುಟ್ಟಸಿದ್ದಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

 

 

 

ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕುಲಕಸುಬು ಆಧಾರಿತ ಜಾತಿಗಳಾದ ಕುಂಬಾರ, ನೇಕಾರ, ಗಾಣಿಗ, ಉಪ್ಪಾರ ವಿಶ್ವಕರ್ಮ, ಈಡಿಗ, ಗೊಲ್ಲ, ಬಲಿಜ ಸೇರಿದಂತೆ ಮುಂತಾದ ಕುಲಕಸುಬು ಆಧಾರಿತ ಜನಾಂಗದವರು ಆಧುನಿಕತೆಯ ಭರದಲ್ಲಿ ಕುಲಕಸುಬುಗಳನ್ನು ಮಾಡಲಾಗದೆ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ.

 

 

ಈ ಸಮಯದಲ್ಲಿ ಕಾಯಕ ಸಮುದಾಯಗಳಿಗೆ ಅನ್ಯಾಯ ಮಾಡುವ ರೀತಿಯಲ್ಲಿ ರಾಜ್ಯದಲ್ಲಿ ಬಲಿಷ್ಠವಾಗಿರುವ ಪಂಚಮಸಾಲಿ ಸಮುದಾಯವನ್ನು 2ಎ ಗೆ ಸೇರ್ಪಡೆ ಗೊಳಿಸಿದರೆ ಮುಂಬರುವ 2023ರ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷವನ್ನು ಸೋಲಿಸುವ ಎಚ್ಚರಿಕೆಯನ್ನು ರವಾನಿಸಿದ್ದಾರೆ.

 

 

 

ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಯಕ ಸಮಾಜಗಳು ನಿರ್ಣಾಯಕವಾಗಿದ್ದು ಶೇಕಡಾ 27ರಷ್ಟು ಜನ ಸಂಖ್ಯೆಯಲ್ಲಿರುವ ಕಾಯಕ ಸಮಾಜದವರು ಹೊಂದಿದ್ದಾರೆ. ಇಂತಹ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಇಚ್ಛಾಶಕ್ತಿ ಸರಕಾರಕ್ಕೆ ಇಲ್ಲ ಬಲಿಸ್ತವಾಗಿರುವ ಸಮಾಜಗಳನ್ನು ಹಿಂದುಳಿದ ಮೀಸಲು ಪಟ್ಟಿಗೆ ಸೇರಿಸಲು ಮುಂದಾಗುತ್ತಿದೆ.

 

 

ಪಂಚಮಸಾಲಿ ಸಮುದಾಯ ಮೀಸಲು ಕೇಳುತ್ತಿರುವುದು ಸರಿಯಾದ ನಿರ್ಧಾರವಲ್ಲ ಇನ್ನು ಪಂಚಮಸಾಲಿ ಲಿಂಗಾಯತರಲ್ಲಿ ಸಾಕಷ್ಟು ಪ್ರಬಲ ಹಾಗೂ ಬಲಿಷ್ಠ ಮುಖಂಡರು ರಾಜಕೀಯ ಕ್ಷೇತ್ರದಲ್ಲಿ ಇರುವ ಕಾರಣ ಅವರ ಪ್ರಭಾವ ಕೂಡ ಪಂಚಮಸಾಲಿ ಸಮುದಾಯಕ್ಕೆ ಮೀಸಲು ತರಲು ಒತ್ತಡ ಹೇರುವ ಮೂಲಕ ಇತರೆ ಸಮುದಾಯಗಳಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ ಇದು ಸರಿಯಾದ ಕ್ರಮವಲ್ಲ ಎಂದರು.

 

 

 

ಇನ್ನೂ ಪಂಚಮಸಾಲಿ ಸಮುದಾಯದ ಜಯಮೃತ್ಯುಂಜಯ ಸ್ವಾಮೀಜಿ ಜನಾಂಗವನ್ನು ದಿಕ್ಕುತಪ್ಪಿಸಲು ಹೊರಟಿರುವುದು ಸರಿಯಾದ ಕ್ರಮವಲ್ಲ ಜಯಮೃತ್ಯುಂಜಯ ಶ್ರೀಗಳು ಗುರು ಪೀಠದಲ್ಲಿ ಇರಲು ಯೋಗ್ಯವಾದವನಲ್ಲ , ಆತ ಅಯೋಗ್ಯ, ಕಾವಿ ಹಾಕಿಕೊಳ್ಳಲು ನಾಲಾಯಕ್ ಎಂದು ಕಿಡಿಕಾರಿದ್ದಾರೆ.

 

 

ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಮುದಾಯದ ಮುಖಂಡರುಗಳಾದ ಬೋರಪ್ಪ ಶೆಟ್ಟಿ, ತಿಮ್ಮ ಹನುಮಯ್ಯ, ಸೋಮಶೇಖರ್ ,ಓಂಕಾರಮೂರ್ತಿ ಭೋಜರಾಜ, ಲಕ್ಷ್ಮಿ ಪತಿ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

ವರದಿ_ ವಿಜಯ ಭಾರತ ನ್ಯೂಸ್ ಡೆಸ್ಕ್

Leave a Reply

Your email address will not be published. Required fields are marked *

You cannot copy content of this page

error: Content is protected !!