ಲೋ ಸಭಾ ಚುನಾವಣೆ ತುಮಕೂರಿನಲ್ಲಿ ಗೆಲುವಿನ ನಗೆ ಬಿರಿದ ವಿ ಸೋಮಣ್ಣ.
ತುಮಕೂರು – 2024ರ ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದಾರೆ.
ಇನ್ನು ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಅಚ್ಚರಿ ಪಲಿತಾಂಶ ನೀಡಿರುವ ಭಾರತೀಯ ಜನತಾ ಪಾರ್ಟಿ ಈ ಬಾರಿ ಬೇರೆ ಕ್ಷೇತ್ರದಿಂದ ಬಂದು ತುಮಕೂರಿನಲ್ಲಿ ಚುನಾವಣೆ ಎದುರಿಸಿದ್ದ ಸೋಮಣ್ಣಗೆ ಭರ್ಜರಿ ಮತ ನೀಡುವ ಮೂಲಕ ವಿ ಸೋಮಣ್ಣನ ಗೆಲುವಿಗೆ ಮುನ್ನುಡಿ ಬರೆದಿದ್ದಾರೆ.
ತುಮಕೂರು ಜಿಲ್ಲೆಯ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಹೊರ ಜಿಲ್ಲೆಯಿಂದ ಬಂದ ಅಭ್ಯರ್ಥಿ ಒಬ್ಬರು ಜಿಲ್ಲೆಯಿಂದ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ ಈ ಮೂಲಕ ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಸೋಲಿಗೆ ತಕ್ಕ ಪ್ರತ್ಯುತ್ತರ ನೀಡುವಲ್ಲಿ ಬಿಜೆಪಿ ಪಕ್ಷ ಹಾಗೂ ಜೆಡಿಎಸ್ ಪಕ್ಷ ಈ ಬಾರಿ ಯಶಸ್ಸು ಕಂಡಿದೆ.
ಇನ್ನು ಮತ ಎಣಿಕೆ ಕಾರ್ಯ ಆರಂಭದಿಂದಲೂ ಸತತ ಮುನ್ನಡೆ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ ಬಿ ಸೋಮಣ್ಣ ರವರು 720946 ಮತಗಳನ್ನು ಪಡೆದು ಗೆದ್ದು ಬೀಗಿದ್ದರೆ .
ಇನ್ನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಮಾಜಿ ಸಂಸದ ಮುದ್ದಹನುಮೇಗೌಡ ರವರು 545,352 ಮತಗಳನ್ನು ಪಡೆದಿದ್ದು ಸೋಮಣ್ಣ ರವರು ಕಾಂಗ್ರೆಸ್ ಪಕ್ಷದ ಮುದ್ದಹನುಮೇಗೌಡರಿಗೆಂತ 175,594 ಮತಗಳನ್ನು ಪಡೆಯುವ ಮೂಲಕ ಜಿಲ್ಲೆಯ ರಾಜಕಾರಣದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ.
ಇನ್ನು ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನೂತನ ಸಂಸದ ವಿ ಸೋಮಣ್ಣ ರವರು ಮಾತನಾಡಿದ್ದು ಇನ್ನು ಈ ಚುನಾವಣಾ ಗೆಲುವು ತುಮಕೂರು ಜಿಲ್ಲೆಯ ಜನತೆಗೆ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ರವರಿಗೆ ಅರ್ಪಿಸಿದ್ದು ಇನ್ನು ಚುನಾವಣೆಯಲ್ಲಿ ಗೆಲುವು ಪಡೆಯಲು ಸಹಕರಿಸಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಬಾರಿಯ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಅಚ್ಚರಿ ಫಲಿತಾಂಶ ಪಡೆದಿರುವ ವಿ ಸೋಮಣ್ಣ ರವರು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚು ಮತಗಳನ್ನು ಪಡೆದಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ .
ಇನ್ನು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲು ಜಿಲ್ಲೆಯ ಇಬ್ಬರು ಸಚಿವರಿಗೆ ಹಿನ್ನಡೆ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಸೋಲಿನ ಲೆಕ್ಕಾಚಾರಕ್ಕೇ ಮುಂದಾಗಿದೆ ಕಾರಣ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ಪ್ರತಿನಿಧಿಸುವ ಕೊರಟಗೆರೆ ಹಾಗೂ ಸಹಕಾರ ಸಚಿವ ಕೆ ಎನ ರಾಜಣ್ಣ ಪ್ರತಿನಿಧಿಸುವ ಮಧುಗಿರಿ ಎರಡು ಕ್ಷೇತ್ರದಲ್ಲೂ ಈ ಬಾರಿ ಮತದಾರ ಪ್ರಭು ಬಿಜೆಪಿ ಪಕ್ಷಕ್ಕೆ ಹೆಚ್ಚು ಮತ ನೀಡುವ ಮೂಲಕ ಇಬ್ಬರು ಸಚಿವರಿಗೆ ಶಾಕ್ ನೀಡಿದ್ದಾರೆ .
ಇದರ ನಡುವೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುದ್ದಹನುಮೇಗೌಡರಿಗೆ ಗೆಲುವಿನ ದಡ ಸೇರಿಸಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸೋತಿದ್ದು ಗೌಡರ ಸೋಲಿಗೆ ಯಾರು ಹೊಣೆ ಎನ್ನುವ ಪ್ರಶ್ನೆಯನ್ನು ಸಹ ಪಕ್ಷದ ವಲಯದಲ್ಲಿ ಹುಟ್ಟು ಹಾಕಿದೆ.
ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನೇ ನೆಚ್ಚಿ ಕೂತಿದ್ದ ಜಿಲ್ಲೆಯ ನಾಯಕರಿಗೆ ಸೋಮಣ್ಣ ರವರ ಗೆಲುವು ಆಗಾತ ತಂದಿರುವುದು ಒಂದೆಡೆಯಾದರೆ ಮತ್ತೊಂದೆಡೆ ಬೇರೆ ಕ್ಷೇತ್ರದಿಂದ ಬಂದು ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಗೆದ್ದಿರುವ ಸೋಮಣ್ಣ ತುಮಕೂರು ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿ ಮಾಡಿದ್ದು ಮುಂದೆ ಅವರ ಆಡಳಿತ ವೈಕರಿ ಹೇಗಿರಲಿದೆ ಎಂಬುದು ಮತ್ತಷ್ಟು ಕುತೂಹಲ ಮೂಡಿಸಿದೆ.
ವರದಿ -ಮಾರುತಿ ಪ್ರಸಾದ್ ತುಮಕೂರು