ಖಾಸಗೀ ವ್ಯಕ್ತಿಯಿಂದ ಸರ್ಕಾರಿ ಶಾಲೆ ಜಾಗ ಕಬಳಿಸಲು ಹುನ್ನಾರ: ಕುಚ್ಚಂಗಿಪಾಳ್ಯ ಗ್ರಾಮಸ್ತರಿಂದ ಮತದಾನ ಬಹಿಷ್ಕಾರ…
ತುಮಕೂರು -ತುಮಕೂರು ತಾಲ್ಲೂಕು ಕುಚ್ಚಂಗಿ ಪಾಳ್ಯದ ಸರ್ಕಾರಿಶಾಲೆ ಜಾಗಕ್ಕೆ ಖಾಸಗೀ ವ್ಯಕ್ತಿ ನ್ಯಾಯಾಲಯದ ಆದೇಶ ತಂದು ಅತಿಕ್ರಮಪ್ರವೇಶಕ್ಕೆ ಮುಂದಾಗಿರುವುದನ್ನು ಖಂಡಿಸಿ ಗ್ರಾಮಸ್ತರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಕುಚ್ಚಂಗಿ ಪಾಳ್ಯದ ಸರ್ಕಾರಿ ಶಾಲೆ ಜಮೀನನ್ನು ಖಾಸಗೀ ವ್ಯಕ್ತಿ ನ್ಯಾಯಾಲಯದ ಆದೇಶ ತಂದು ಅತಿಕ್ರಮ ಪ್ರವೇಶಕ್ಕೆ ಮುಂದಾಗಿದ್ದಾರೆ ಜೀವ ಬಿಡುತ್ತೇವೆ ಸರ್ಕಾರಿ ಶಾಲೆ ಬಿಡುವುದಿಲ್ಲ ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳು ಸ್ತಳಕ್ಕೆ ಬಂದು ನಮ್ಮ ಸಮಸ್ಯೆ ಬಗೆಹರಿಸುವವರೆಗೂ ನಾವು ಮತ ನೀಡುವುದಿಲ್ಲ ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದರು.
ಗ್ರಾಮಪಂಚಾಯ್ತಿ ಸದಸ್ಯ ಶಿವಕುಮಾರ್ ಮಾತನಾಡಿ 40 ವರ್ಷದಿಂದ ಕುಚ್ಚಂಗಿ ಪಾಳ್ಯದಲ್ಲಿ ಸರ್ಕಾರಿ ಶಾಲೆ ಚಾಲ್ತಿಯಲ್ಲಿದೆ,ಆದರೆ ಈಗ ಏಕಾಏಕಿ ಖಾಸಗೀ ವ್ಯಕ್ತಿಯೊಬ್ಬರು ನ್ಯಾಯಾಲಯದ ಆದೇಶ ತಂದು ಅತಿಕ್ರಮ ಪ್ರವೇಶಕ್ಕೆ ಮುಂದಾಗಿದ್ದರೆ,ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆ ಒಂದಿಚೂ ಬಿಡುವುದಿಲ್ಲ,ನಮ್ಮೂರು ಶಾಲೆ ಸಮಸ್ಯೆ ಬಗೆಹರಿಯುವವರೆಗೂ ಮತ ಹಾಕುವುದಿಲ್ಲ, ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದರು.
ಕುಚ್ಚಂಗಿ ಪಾಳ್ಯ ಗ್ರಾಮಸ್ತರಾದ ರಂಗಸ್ವಾಮಯ್ಯ,ನವೀನ್ ಕುಮಾರ್,ಉಮಾಶಂಕರ್,ನವೀನ್,ಕೃಷ್ಣಪ್ಪ,ಭೀಮರಾಜು ,ಮಹೇಶ್,ಶ್ರೀಧರ್,ಚಂದ್ರಶೇಖರ್,ಎಸ್ ಡಿ ಎಂ ಸಿ ಅಧ್ಯಕ್ಷೆ ರೋಹಿಣಿ,ಕೆ.ಆರ್.ರೇಣುಕ,ಗಂಗಮ್ಮ ,ರೂಪ ಹಾಗೂ ಶಾಲಾ ಮಕ್ಕಳು ಉಪಸ್ತಿತರಿದ್ದರು.