ಹೇಮಾವತಿ ಎಕ್ಸ್ಪ್ರೆಸ್ ಕೆನಲ್ ಹೇಮಾವತಿ ಎಕ್ಸ್ಪ್ರೆಸ್ ಕೆನಲ್ ಕಾಮಗಾರಿ ರಾಜ್ಯ ಸರ್ಕಾರದ ತೀರ್ಮಾನ ಡಾಕ್ಟರ್ ಜಿ ಪರಮೇಶ್ವರ್.
ತುಮಕೂರು – ಹೇಮಾವತಿ ಎಕ್ಸ್ಪ್ರೆಸ್ ಲಿಂಕಿಂಗ್ ಕೆನಾಲ್ ಯೋಜನೆ ರಾಜ್ಯ ಸರ್ಕಾರದ ಯೋಜನೆಯಾಗಿದೆ ಎಂದು ಡಾಕ್ಟರ್ ಜಿ ಪರಮೇಶ್ವರ್ ತಿಳಿಸಿದರು.
ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ 24 ಟಿಎಂಸಿ ನೀರು ನಿಗದಿಯಾಗಿದ್ದು ಇನ್ನೂ ಪ್ರತಿ ವರ್ಷ ತುಮಕೂರು ಜಿಲ್ಲೆಗೆ 18 ರಿಂದ 19 ಟಿಎಂಸಿ ನೀರು ಮಾತ್ರ ಜಿಲ್ಲೆಗೆ ಕುಡಿಯುವ ನೀರಿಗಾಗಿ ಬಳಕೆಯಾಗುತ್ತಿದೆ ಇನ್ನು ಉಳಿದ ನೀರು, ಹಾಸನ ಜಿಲ್ಲೆಗೆ ಅನುಕೂಲವಾಗುತ್ತಿದ್ದು ಇನ್ನೂ ಜಿಲ್ಲೆಗೆ ನಿಗದಿಯಾಗಿರುವ ನೀರಿನಲ್ಲಿ ಜಿಲ್ಲೆಯ ಕುಣಿಗಲ್ ತಾಲೂಕಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಕ್ಸ್ಪ್ರೆಸ್ ಕ್ಯಾನಲ್ ಲಿಂಕಿಂಗ್ ಯೋಜನೆಯ ರಾಜ್ಯ ಸರ್ಕಾರ ಜಾರಿಗೆ ತಂದಿದೆ ಎಂದರು.
ಇನ್ನು ತುಮಕೂರು ಜಿಲ್ಲೆಯಲ್ಲಿ ಹಲವು ರಾಜಕೀಯ ಪಕ್ಷಗಳು ಹಾಗೂ ವಿವಿಧ ಮುಖಂಡರು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು ನಮಗೂ ಸಹ ಹಲವು ಮನವಿಗಳನ್ನ ನೀಡುವ ಮೂಲಕ ಹೇಮಾವತಿ ಲಿಂಕಿಂಗ್ ಎಕ್ಸ್ಪ್ರೆಸ್ ಯೋಜನೆಯ ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ ಇನ್ನು ಎಲ್ಲಾ ಮನವಿಯನ್ನ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದ್ದು ಮುಂದಿನ ದಿನದಲ್ಲಿ ಇದರ ಬಗ್ಗೆ ಮಾಹಿತಿಯನ್ನ ನಾನು ಕೂಡ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದರು.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ 70ನೇ ಮೈಲಿಗಲ್ಲಿನಿಂದ ಕುಣಿಗಲ್ ತಾಲೂಕಿನ ಕೆರೆಗೆ ಕುಡಿಯುವ ನೀರು ಯೋಜನೆಗೆ ನೀರನ್ನ ತೆಗೆದುಕೊಂಡು ಹೋಗುವ ಸಲುವಾಗಿ ಕಳೆದ ಐದು ವರ್ಷದಿಂದ ಸರ್ಕಾರದ ಮುಂದೆ ಚರ್ಚೆಗೆ ಬಂದಿತ್ತು ಅದರಂತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 1000 ಕೋಟಿ ರೂಗಳ ಹಣವನ್ನು ಮೀಸಲಿಟ್ಟು ಯೋಜನೆಯ ಜಾರಿಗೆ ತರಲಾಗಿದೆ ಎಂದರು.
ಇನ್ನು ಯೋಜನೆಗೆ ಜಿಲ್ಲೆಯಾದ್ಯಂತ ಪರ ವಿರೋಧ ವ್ಯಕ್ತವಾಗಿದೆ ಇನ್ನು ಈ ಯೋಜನೆ ಪರಮೇಶ್ವರ್ ಅಥವಾ ಸಚಿವ ಕೆ.ಏನ್ ರಾಜಣ್ಣ ರವರ ಯೋಜನೆಯಲ್ಲ ಬದಲಿಗೆ ಇದು ರಾಜ್ಯ ಸರ್ಕಾರದ ಯೋಜನೆ ಎಂದು ಸ್ಪಷ್ಟಪಡಿಸಿದರು.
ಇನ್ನು ಯೋಜನೆಗೆ ಸಂಬಂಧಿಸಿದಂತೆ ತುಮಕೂರು ಗುಬ್ಬಿ ಹಾಗೂ ತುರುವೇಕೆರೆ ಭಾಗದ ಸಾರ್ವಜನಿಕರು ಕುಣಿಗಲ್ ಭಾಗಕ್ಕೆ ನೀರನ್ನು ತೆಗೆದುಕೊಂಡು ಹೋದರೆ ನಮಗೆ ನೀರಿನ ತೊಂದರೆ ಆಗಲಿದೆ ಎಂದು ಸರ್ಕಾರದ ಗಮನವನ್ನು ಸೆಳೆಯಲು ಮುಂದಾಗಿದ್ದಾರೆ ಎಂದರು.
ಇನ್ನು ಕಳೆದ ಬಾರಿಯ ಕ್ಯಾಬಿನೆಟ್ ನಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವನಾದ ನಾನು ಸೇರಿದಂತೆ ಸಚಿವ ಕೆಎನ್ ರಾಜಣ್ಣ ಇಬ್ಬರು ಸಹ ವಿರೋಧ ವ್ಯಕ್ತಪಡಿಸಿದ್ದೆವು ಆದರೆ ಕ್ಯಾಬಿನೆಟ್ ತೀರ್ಮಾನ ನಮ್ಮಿಬ್ಬರ ತೀರ್ಮಾನವಲ್ಲ ಬದಲಾಗಿ ಹಲವು ಸಚಿವರು ಹಾಗೂ ಸರ್ಕಾರದ ತೀರ್ಮಾನವಾಗಿದ್ದು ಅದರಂತೆ ಯೋಜನೆ ಜಾರಿಯಾಗಿದೆ. ಎಂದರು.
ಇನ್ನು ಯೋಜನೆಗೆ ಸಂಬಂಧಿಸಿದಂತೆ ಮುಂದಿನ ದಿನದಲ್ಲಿ ಮುಖ್ಯಮಂತ್ರಿಯೊಂದಿಗೆ ತುಮಕೂರು ಜಿಲ್ಲೆಯ ಎಲ್ಲಾ ಶಾಸಕರುಗಳನ್ನ ಒಳಗೊಂಡಂತೆ ಸಾಧಕ ಬಾಧಕಗಳನ್ನ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದ್ದಾರೆ.
ವರದಿ ಮಾರುತಿ ಪ್ರಸಾದ್ ತುಮಕೂರು