ಮಲ್ಟಿ ಯುಟಿಲಿಟಿ ಮಾಲ್ ನಿರ್ಮಾಣ ವಿವಾದ, ತುಮಕೂರು ಚಲೋ ಎಚ್ಚರಿಕೆ ರವಾನಿಸಿದ ಪ್ರಮೋದ್ ಮುತಾಲಿಕ್. 

ಮಲ್ಟಿ ಯುಟಿಲಿಟಿ ಮಾಲ್ ನಿರ್ಮಾಣ ವಿವಾದ, ತುಮಕೂರು ಚಲೋ ಎಚ್ಚರಿಕೆ ರವಾನಿಸಿದ ಪ್ರಮೋದ್ ಮುತಾಲಿಕ್. 

 

 

ತುಮಕೂರು _ ತುಮಕೂರು ನಗರದಲ್ಲಿ ಮಲ್ಟಿ ಯುಟಿಲಿಟಿ ಮಾಲ್ ನಿರ್ಮಾಣ ವಿವಾದ ದಿನೇ ದಿನೇ ಹೆಚ್ಚಾಗುತ್ತಿದ್ದು ವಿವಾದಕ್ಕೆ ಸಂಬಂಧಿಸಿದಂತೆ ಮಾಲ್ ನಿರ್ಮಾಣ ಹಾಗು ವಿನಾಯಕ ದೇವಾಲಯ ಸ್ಥಳಾಂತರಕ್ಕೆ ಮುಂದಾದರೆ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ತುಮಕೂರು ಚಲೋ ಹಮ್ಮಿಕೊಳ್ಳಲಾಗುವುದು ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

 

 

 

 

ಗುರುವಾರ ತುಮಕೂರಿನ ವಿವಾದಿತ ಸ್ಥಳಕ್ಕೆ ಭೇಟಿ ನೀಡಿದ ಪ್ರಮೋದ್ ಮುತಾಲಿಕ್ ರವರು ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಸ್ಥಳೀಯ ವರ್ತಕರೊಂದಿಗೆ ಚರ್ಚಿಸಿದ್ದಾರೆ.

 

 

 

 

ಇದೇ ಸಂದರ್ಭದಲ್ಲಿ ಮಾತನಾಡಿರುವ ಅವರು ರಾಜ್ಯದಲ್ಲಿ ಸಾಕಷ್ಟು ವಿವಾದಿತ ದೇವಾಲಯಗಳು, ಪ್ರಾರ್ಥನಾ ಮಂದಿರಗಳು ಇದ್ದು ಅವುಗಳ ಸ್ಥಳಾಂತರಕ್ಕೆ ಮುಂದಾಗದ ಸ್ಥಳೀಯ ಆಡಳಿತ ಹಾಗೂ ಸರ್ಕಾರ ಏಕಾಏಕಿ ಮಾಲ್ ನಿರ್ಮಾಣದ ಹೆಸರಿನಲ್ಲಿ ಹಲವು ವರ್ಷಗಳಿಂದ ಪೂಜೆ ಸಲ್ಲಿಸುತ್ತಿರುವ ವಿನಾಯಕ ದೇವಾಲಯವನ್ನು ಸ್ಥಳಾಂತರಕ್ಕೆ ಮುಂದಾಗಿರುವುದು ನಿಜಕ್ಕೂ ಖಂಡನೀಯ ಎಂದಿರುವ ಅವರು.

 

 

 

 

 

 

ಹೀಗಿರುವ ಸಾಕಷ್ಟು ವಿವಾದ ಜಾಗಗಳನ್ನ ತೆರವುಗೊಳಿಸಿ ನಂತರ ತುಮಕೂರು, ಮಂಡಿಪೇಟೆಯ ವಿನಾಯಕ ದೇವಾಲಯ ತೆರವಿಗೆ ಮುಂದಾಗಿ ಇಲ್ಲವಾದಲ್ಲಿ ನಾವೇ ಸ್ವತಹ ದೇವಾಲಯದ ತೆರವಿಗೆ ಮುಂದಾಗುತ್ತೇವೆ ಅದನ್ನ ಬಿಟ್ಟು ಏಕಾಯಕಿ ಮಾಲ್ ನಿರ್ಮಾಣ ಕಾಮಗಾರಿಯ ಹೆಸರಿನಲ್ಲಿ ದೇವಾಲಯ ತೆರವುಗೊಳಿಸಲು ಮುಂದಾಗಿರುವುದು ಸರಿಯಲ್ಲ.

 

 

 

 

 

 

ಮಾಲ್ ನಿರ್ಮಾಣಕ್ಕೆ ಮುಂದಾಗಿರುವ ಜಾಗದಲ್ಲಿ ಇರುವ ದೇವಾಲಯದ ಒಂದು ಕಲ್ಲನ್ನು ಸಹ ನಾವು ತೆರವುಗೊಳಿಸಲು ಬಿಡುವುದಿಲ್ಲ ಹಿಂದುಗಳು ಸಮಾಧಾನದಿಂದ ಇದ್ದಾರೆ ಎಂದರೆ ತಾಳ್ಮೆ ಇಂದಲ್ಲ ಹಿಂದುಗಳ ತಾಳ್ಮೆ ಶಕ್ತಿ ಏನೆಂಬುದನ್ನು ತುರ್ತು ಸಂದರ್ಭದಲ್ಲಿ ತೋರಿಸಿದ್ದೇವೆ ಅಂತಹ ಸನ್ನಿವೇಶಕ್ಕೆ ಸ್ಥಳೀಯ ಆಡಳಿತ ಅವಕಾಶ ನೀಡಬಾರದು ಎಂದರು.

 

 

 

 

 

 

 

ಹಲವು ವರ್ಷಗಳಿಂದ ಸ್ಥಳದಲ್ಲಿ ಇರುವ ದೇವಾಲಯಕ್ಕೆ ಪೂಜೆ ಸಲ್ಲಿಸುತ್ತಿರುವ ಹಿಂದುಗಳ ಭಾವನೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕಿರುವುದು , ಸ್ಥಳೀಯ ಆಡಳಿತ,ಸರ್ಕಾರ ಹಾಗೂ ಗೃಹ ಸಚಿವರ ಕರ್ತವ್ಯ.

 

 

 

 

 

 

 

ಕಾನೂನು ಬಾಹಿರವಾದ ಕಂಟ್ರಾಕ್ಟರ್ ಗೆ ಕಾಮಗಾರಿಯ ಗುತ್ತಿಗೆ ನೀಡಿದ್ದು ಇದರ ನಡುವೆ ದೇವಾಲಯ ಹಾಗೂ ಪಾರ್ಕ್ ವಿಚಾರದಲ್ಲಿ ಕೈ ಹಾಕಿರುವುದು ಒಳ್ಳೆಯ ನಡೆಯಲ್ಲ ಒಂದು ವೇಳೆ ದೇವಾಲಯದ ಸ್ಥಳಾಂತರ ಹಾಗೂ ಮಾಲ್ ನಿರ್ಮಾಣಕ್ಕೆ ಮುಂದಾದರೆ ರಾಜ್ಯದ್ಯಂತ ಹಿಂದೂಪರ ಸಂಘಟನೆಗಳನ್ನ ಒಗ್ಗೂಡಿಸಿ ತುಮಕೂರು ಚಲೋ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

 

 

 

 

 

ಇದೇ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಶ್ರೀನಿವಾಸ್ ,ಬಜರಂಗದಳದ ಮಂಜು ಬಾರ್ಗಾವ್, ಯತೀಶ್ ಸೇರಿದಂತೆ ಹಲವು ವರ್ತಕರು ಸ್ಥಳದಲ್ಲಿ ಹಾಜರಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!