ಭರ್ಜರಿ ಮಳೆಗೆ  ಕೊಡಿ ಬಿದ್ದ ತುಮಕೂರು ಅಮಾನಿಕೆರೆ ಮುಚ್ಚಿದ ಸಿರಾ ಗೇಟ್ ರಸ್ತೆ,

ಭರ್ಜರಿ ಮಳೆಗೆ  ಕೊಡಿ ಬಿದ್ದ ತುಮಕೂರು ಅಮಾನಿಕೆರೆ ಮುಚ್ಚಿದ ಸಿರಾ ಗೇಟ್ ರಸ್ತೆ.

 

ತುಮಕೂರು _ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ತುಮಕೂರು ಜಿಲ್ಲೆಯಲ್ಲಿ ಸಾಕಷ್ಟು ಅವಾಂತರವೇ ಸೃಷ್ಟಿಯಾಗಿದ್ದು ಇದರ ನಡುವೆ ಮಂಗಳವಾರ ಬಿದ್ದ ಭಾರಿ ಮಳೆಗೆ ತುಮಕೂರಿನ ಅಮಾನಿಕೆರೆ ಕೋಡಿ ಬಿದ್ದಿದ್ದು ವಾಹನ ಸವಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

 

 

 

ತುಮಕೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಮೂಲ ರಸ್ತೆಯಾಗಿದ್ದ ತುಮಕೂರು ಹಾಗೂ ಶಿರಾ ಗೇಟ್ ರಸ್ತೆ ಮಂಗಳವಾರ ಸುರಿದ ಬಾರಿ ಮಳೆಗೆ ತುಮಕೂರಿನ ಅಮಾನೀಕೆರೆ ಕೋಡಿ ಬಿದ್ದ ಪರಿಣಾಮ ರಸ್ತೆಯನ್ನ ಮುಚ್ಚಲಾಗಿದ್ದು ಬದಲಿ ರಸ್ತೆ ಬಳಸಲು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಾಹನ ಸವಾರರಿಗೆ ಮನವಿ ಮಾಡಿದ್ದಾರೆ.

 

 

 

 

ಇತ್ತೀಚಿಗೆ ತುಮಕೂರು ಅಮಾನಿಕೆರೆ ಕೋಡಿ ಬಳಿ ರಸ್ತೆ ಅಗಲೀಕರಣ ಹಾಗೂ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ತಾತ್ಕಾಲಿಕವಾಗಿ ದ್ವಿಚಕ್ರ ವಾಹನಸವರರು ಹಾಗೂ ಆಟೋ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಿ ಅನುವು ಮಾಡಿಕೊಡಲಾಗಿತ್ತು ಆದರೆ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ತುಮಕೂರಿನ ಅಮಾನಿಕೆರೆ ಕೋಡಿ ಬಳಿ ರಸ್ತೆ ಹಾಳಾಗಿದ್ದು ಇದರಿಂದ ವಾಹನ ಸವಾರರು ಹೈರಾಣ ಆಗುವಂತಾಗಿದೆ.

 

 

 

ಈ ಬಗ್ಗೆ ಪತ್ರಿಕಾ ಹೇಳಿಕೆ ಹೊರಡಿಸಿರುವ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಾತ್ಕಾಲಿಕವಾಗಿ ಬದಲಿ ರಸ್ತೆಗಳನ್ನ ಬಳಸಿಕೊಂಡು ಸಂಚರಿಸಲು ತುಮಕೂರಿನ ವಾಹನ ಸವಾರರಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *