ತುಮಕೂರು ನಗರದಲ್ಲಿ ಯುವಕನ ಭೀಕರ ಕೊಲೆ.

ತುಮಕೂರು ನಗರದಲ್ಲಿ ಯುವಕನ ಭೀಕರ ಕೊಲೆ.

 

 

ತುಮಕೂರು _ ಮನೆಯಲ್ಲಿ ಊಟ ಮಾಡುತ್ತಿದ್ದ ಯುವಕ ನನ್ನ ಮನೆಯಿಂದ ಹೊರ ತರೆದು ಚಾಕುವಿನಿಂದ ಚುಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.

 

 

 

ತುಮಕೂರು ನಗರದಲ್ಲಿ ದಿನ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು ಅದಕ್ಕೆ ಕಡಿವಾಣವೇ ಇಲ್ಲದಂತಾಗಿದೆ.

 

 

 

 

 

ತುಮಕೂರು ನಗರದ ಮರಳೂರು ಡಿನ್ನೆಯ ಆರನೇ ಕ್ರಾಸ್ ನಲ್ಲಿ ವಾಸವಿದ್ದ ಯುವಕನನ್ನ ಮನೆ ಮುಂದೆ ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ನಗರವನ್ನ ಬೆಚ್ಚಿ ಬೆಳಿಸಿದೆ.

 

 

 

 

 

ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ ರಿಹಾನ್ (18) ಎಂಬತನನ್ನು ಮನೆ ಮುಂದೆ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೇ.

 

 

 

 

 

 

 

ಮರಳೂರು ದಿಣ್ಣೆಯಲ್ಲಿ ವಾಸವಿರುವ ರಿಹಾನ್ ನನ್ನ ಅದೇ ಏರಿಯಾದ ಸಾಧಿಕ್ ಅಬ್ಬಾಸ್ ಸೇರಿದಂತೆ ನಾಲ್ವರು ಯುವಕರು ಶುಕ್ರವಾರ ರಾತ್ರಿ ಮನೆ ಬಳಿ ತೆರಳಿ, ಊಟ ಮಾಡುತ್ತಿದ್ದ ರಿಹಾನ್ ನನ್ನ ಮನೆಯಿಂದ ಹೊರ ಕರೆದು ಮನೆ ಮುಂದೆ ಚಾಕುವಿನಿಂದ ಚುಚ್ಚಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

 

 

 

 

 

ಮನೆ ಮುಂದೆ ಕೊಲೆಯಾದ ರಿಹಾನ ನ ಪರಿಸ್ಥಿತಿ ಕಂಡು ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ.

 

 

 

 

 

 

ರಕ್ತದ ಮಡುವಿನಲ್ಲಿ ಬಿದ್ದಿದ್ದ ರಿಹಾನನ ಕೂಡಲೇ ಸ್ಥಳೀಯರು ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಿದರು ಹೆಚ್ಚಿನ ಚಿಕಿತ್ಸೆ ಬೇಕಿರುವ ಕಾರಣ ಬೆಂಗಳೂರಿಗೆ ರವಾನಿಸಲಾಗುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ರಿಹಾನ್ ಸಾವನ್ನಪ್ಪಿದ್ದಾನೆ.

 

 

 

 

 

ಇನ್ನು ಕೊಲೆ ಮಾಡಿರುವ ಆರೋಪಿಗಳು ಗಾಂಜಾ, ಸೊಲ್ಯೂಷನ್ ಚಟಕ್ಕೆ ಮರು ಹೋಗಿದ್ದರು ಎನ್ನಲಾಗಿದೆ.

 

 

 

ಕಳೆದ ಒಂದು ವರ್ಷದ ಹಿಂದೆಯೂ ಸಹ ರಿಹಾನ್ ನ ಮೇಲೆ ಸಾಧಿಕ್ ಗಲಾಟೆ ಮಾಡಿದ್ದ ಎಂದು ಪೋಷಕರು ತಿಳಿಸಿದ್ದು ಗಾಂಜಾ ಸೊಲ್ಯೂಷನ್ ಗೆ ಮಾರುಹೋಗಿರುವ ಯುವಕರು ನನ್ನ ಮಗನನ್ನು ಬೀಕರವಾಗಿ ಕೊಲೆ ಮಾಡಿದ್ದು ಕೂಡಲೇ ಕೊಲೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ರಿಹಾನ್ ತಂದೆ ಹಾಗು ಪೋಷಕರು ಒತ್ತಾಯಿಸಿದ್ದಾರೆ.

 

 

 

 

 

ಘಟನೆ ನಡೆದ ಕೂಡಲೇ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದು ಸಾಧಿಕ್ ಹಾಗೂ ಅಬ್ಬಾಸ್ ನನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದು ಉಳಿದ ಇಬ್ಬರು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದು.

 

 

 

 

ಮೃತಪಟ್ಟ ಯುವಕನ ಶವವನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

Leave a Reply

Your email address will not be published. Required fields are marked *