ಉತ್ತರ ಭಾರತದಲ್ಲಿ ನಡೆದಂಥ ಅಮಾನವೀಯ ಘಟನೆ ತುಮಕೂರಿನಲ್ಲಿ ,ಸತ್ತ ವ್ಯಕ್ತಿಗೆ ಇದೆಂಥ ಅವಮಾನ….?

ಉತ್ತರ ಭಾರತದಲ್ಲಿ ನಡೆದಂಥ ಅಮಾನವೀಯ ಘಟನೆ ತುಮಕೂರಿನಲ್ಲಿ ,ಸತ್ತ ವ್ಯಕ್ತಿಗೆ ಇದೆಂಥ ಅವಮಾನ….?

 

 

ಪಾವಗಡ: ಇದುವರೆಗೂ ಉತ್ತರ ಭಾರತದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆ ಇಲ್ಲದೆ, ಸರಿಯಾದ ವೈದ್ಯಕೀಯ ಸವಲತ್ತು ಇಲ್ಲದ ,ಸತ್ತ ವ್ಯಕ್ತಿಯ ಮೃತದೇಹ ಸಾಗಿಸಲು ಹಣ ಇಲ್ಲದೆ ಮೃತಪಟ್ಟ ವ್ಯಕ್ತಿಯ ಶವವನ್ನು ಹೆಗಲ ಮೇಲೆ ಹೊತ್ತು ಸಾಗಿದ ಘಟನೆಯ ಸುದ್ದಿಗಳನ್ನು ಕೇಳಿದ್ದೆವು.

 

 

 

 

 

ಅಂತಹದ್ದೇ ಸುದ್ದಿಯೊಂದು ತುಮಕೂರು ಜಿಲ್ಲೆಯ ಅತಿ ಹಿಂದುಳಿದ ಹಾಗು ಬರಪೀಡಿತ ಪಾವಗಡ ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ಎಡವಟ್ಟಿನಿಂದ ಮಾಡಿದ ಮತ್ತೊಂದು ಅಮಾನವೀಯ ಘಟನೆ ಹೊರಬಿದ್ದಿದ್ದು.

 

 

 

 

 

ಮೃತಪಟ್ಟ ವ್ಯಕ್ತಿಯ ಮೃತದೇಹ ಸಾಗಿಸಲು ಆಂಬುಲೆನ್ಸ್ ಇಲ್ಲದ ಕಾರಣ ವೃದ್ಧರೊಬ್ಬರ ಮೃತದೇಹವನ್ನು ತಮ್ಮೂರಿಗೆ ದ್ವಿಚಕ್ರ ವಾಹನದಲ್ಲಿ ಮೃತನ ಮಕ್ಕಳು ತೆಗೆದುಕೊಂಡು ಹೋದ ಹೃದಯವಿದ್ರಾವಕ ಘಟನೆ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ಬುಧವಾರ ಮಧ್ಯಾಹ್ನ ಸುಮಾರು ಒಂದು ಗಂಟೆಯಲ್ಲಿ ಜರುಗಿದೆ.

 

 

 

 

 

 

 

ವಯೋಸಹಜ ಕಾಯಿಲೆಯಿಂದ ದಳವಾಯಿ ಹಳ್ಳಿ ಗ್ರಾಮದ ಗುಡುಗುಲ್ಲ ಹೊನ್ನೂರಪ್ಪ ಎನ್ನುವ 80 ವರ್ಷದ ವಿರುದ್ಧ ವೈ.ಎನ್.ಹೋಸಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದ್ದರು.

 

 

 

 

 

 

 

ಮೃತಪಟ್ಟಿರುವ ಹೊನ್ನೂರಪ್ಪ ಅವರ ಮೃತದೇಹವನ್ನ ಸಾಗಿಸಲು ಆಂಬುಲೆನ್ಸ್ ಇಲ್ಲದ ಕಾರಣ ದ್ವಿಚಕ್ರ ವಾಹನದಲ್ಲಿಯೇ ಹೊನ್ನೂರಪ್ಪ ಅವರ ಹಿರಿಯ ಪುತ್ರ ಚಂದ್ರಣ್ಣ ಮತ್ತು ಕಿರಿಯ ಪುತ್ರ ಗೋಪಾಲಪ್ಪ ತಮ್ಮೂರಿಗೆ ತೆಗೆದುಕೊಂಡು ತೆಗೆದುಕೊಂಡು ಹೋಗಿದ್ದಾರೆ.

 

 

 

 

 

 

ಪಾವಗಡ ತಾಲೂಕು ಎಷ್ಟು ಹಿಂದುಳಿದರು ಇಂತಹ ಹೃದಯವಿದ್ರಾವಕ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿರುವುದು ಒಂದು ರೀತಿ ಆಡಳಿತದ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.

 

 

 

 

 

 

 

ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ಸಚಿವರುಗಳು ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯವಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!