ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ನಿವೃತ್ತ ಪೊಲೀಸ್ ಮಹಾನಿರ್ದೇಶಕರಾದ ಶಂಕರ್ ಮಹದೇವಪ್ಪ ಬಿದರಿ.
ಇಂದು ಬೆಳಗ್ಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ನಿವೃತ್ತ ಪೊಲೀಸ್ ಮಹಾನಿರ್ದೇಶಕರಾದ ಶಂಕರ್ ಬಿದರಿ ರವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಇಂದು ಕುಟುಂಬ ಸಮೇತ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆ ನಮಿಸಿ ನಂತರ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದರು.
ನಂತರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಶಂಕರ್ ಬಿದರಿಯವರು. ಇಂದು ತಮ್ಮ 67ನೇ ಹುಟ್ಟು ಹಬ್ಬದ ಪ್ರಯುಕ್ತ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದು ಪ್ರತಿವರ್ಷವೂ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದೇನೆ ಆದರೆ ಈ ಈ ಬಾರಿ ಕರೋನ ಸಾಂಕ್ರಾಮಿಕ ರೋಗದಿಂದ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಅದರ ಪ್ರಯುಕ್ತ ಮಠಕ್ಕೆ ಭೇಟಿ ನೀಡಲಾಗಿದೆ ಎಂದರು.
ಕರೋನಾ ಮಹಾಮಾರಿ ಇಂದ ದೇಶ ರಾಜ್ಯ ಸೊಂಕಿನಿಂದ ಮುಕ್ತವಾಗಿ ದೇಶ ಸುಧೀಕ್ಷ ವಾಗಬೇಕು ಸಹಜ ಸ್ಥಿತಿಗೆ ಬರಬೇಕು ಜನಸಾಮಾನ್ಯರ ಬದುಕು ಹಸನಾಗಬೇಕು , ದೇಶದಾದ್ಯಂತ ಶಾಂತಿ ನೆಲೆಸಬೇಕು , ಧರ್ಮಕ್ಕೆ ಜಯ ಸಿಗಬೇಕು ದುಷ್ಟಶಕ್ತಿ ತೊಲಗಬೇಕು ರಾಜ್ಯಕ್ಕೆ ಒಳ್ಳೆ ಆಡಳಿತ ಸಿಗಲಿ ಎಂದರು.
ನೀರಾವರಿ ಯೋಜನೆಗಳು ಪೂರ್ಣಗೊಳ್ಳಲಿ
ರಾಜ್ಯಾದ್ಯಂತ ಸಾಕಷ್ಟು ನೀರಾವರಿ ಯೋಜನೆಗಳು ನಡೆಯುತ್ತಿದ್ದು ಅಪ್ಪರ್ ಭದ್ರ ಸೇರಿದಂತೆ ಎಲ್ಲ ನೀರಾವರಿ ಯೋಜನೆಗಳು ಪೂರ್ಣಗೊಂಡು ಅದರಿಂದ 40ರಿಂದ 50 ಲಕ್ಷಕ್ಕೂ ಹೆಚ್ಚು ಎಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಹೆಚ್ಚಾಗಲಿದೆ ಎಂದರು.
ಮೂರನೇ ಅಲೆ ಬಾರದಿರಲಿ.
ಇನ್ನು ತಜ್ಞರು ಸಲಹೆಯಂತೆ ಕರೋನ ಮೂರನೇ ಅಲೆ ಬಗ್ಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಎಲ್ಲರೂ ಕೈಗೊಂಡಿದ್ದಾರೆ ಆದರೆ ಕರೋನಾ ಒಂದು ಹಾಗೂ ಎರಡನೇ ಅಲೆಯಲ್ಲಿ ಸಾಕಷ್ಟು ತೊಂದರೆ ಉಂಟಾಗಿದ್ದು ಇನ್ನು ಮೂರನೇ ಅಲೆ ಬಾರದಿರಲಿ ಹಾಗೂ ಮೂರನೇ ಅಲೆ ಬರುವುದಿಲ್ಲ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ವಕ್ತಾರರಾದ ಮುರಳಿದರ ಹಾಲಪ್ಪ, ರೆಡ್ಡಿ ಚಿನ್ನಯಲ್ಲಪ್ಪ, ರೇವಣಸಿದ್ದಯ್ಯ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು