ಅಕ್ರಮ ಮಧ್ಯ ಮಾರಾಟ ನಿಲ್ಲಿಸಲು ದೂರು ನೀಡಿದ ಗ್ರಾಮಸ್ಥರಿಗೆ, ಸವರ್ಣಿಯರಿಂದ ಬಹಿಷ್ಕಾರ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ…???

ಅಕ್ರಮ ಮಧ್ಯ ಮಾರಾಟ ನಿಲ್ಲಿಸಲು ದೂರು ನೀಡಿದ ಗ್ರಾಮಸ್ಥರಿಗೆ, ಸವರ್ಣಿಯರಿಂದ ಬಹಿಷ್ಕಾರ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ…???

 

 

 

ತುಮಕೂರು – ಗ್ರಾಮದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅದರಿಂದ ಬೇಸತ್ತ ಗ್ರಾಮಸ್ಥರು ಅಕ್ರಮ ಮಧ್ಯ ಮಾರಾಟ ತಡೆಗಟ್ಟಲು ದೂರು ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಸವರ್ಣಿಯರು ಬಹಿಷ್ಕಾರ ಹಾಕಿರುವ ಘಟನೆ ವರದಿಯಾಗಿದೆ.

 

 

 

 

ತುಮಕೂರು ಜಿಲ್ಲೆ ಶಿರಾ  ತಾಲೂಕಿನ ಹುಲಿಕುಂಟೆ ಹೋಬಳಿಯ ನಾರಗೊಂಡನಹಳ್ಳಿಯಲ್ಲಿ ಇಂತಹದೊಂದು ಅಮಾನವೀಯ ಘಟನೆ ವರದಿಯಾಗಿದೆ .

 

 

ಕಳೆದ ಕೆಲವು ವರ್ಷಗಳಿಂದ ಈ ಗ್ರಾಮದಲ್ಲಿ ಕೆಲವು   ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದ್ದು ಇದರಿಂದ ಗ್ರಾಮದ ಯುವಕರು ದಾರಿ ತಪ್ಪುತ್ತಿದ್ದ ಪರಿಣಾಮ  ಬಡ ಕುಟುಂಬಗಳು ಕಣ್ಣೀರು ಹಾಕುವಂಥ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಇದರಿಂದ ಬೇಸತ್ತ ಕೆಲ ಹಿರಿಯರು ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಮಾರಾಟ ಚಟುವಟಿಕೆಗೆ ಬ್ರೇಕ್ ಹಾಕಲು ಕಳೆದ ಕೆಲ ದಿನಗಳ ಹಿಂದೆ ಅಬಕಾರಿ ಇಲಾಖೆಗೆ ದೂರು ನೀಡಿದ್ದರು.

 

 

 

 

 

ಇದರಿಂದ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಮಾರುತ್ತಿದ್ದ ಕೆಲ ಮಂದಿಯ ಕೆಂಗಣ್ಣಿಗೆ ಗುರಿಯಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ವಾಸವಾಗಿರುವ ಕೆಲ ದಲಿತ ಕುಟುಂಬಗಳಿಗೆ ಗ್ರಾಮದಲ್ಲಿನ ಅಂಗಡಿಗಳಲ್ಲಿ ದಿನ ನಿತ್ಯ ಬಳಕೆಯ ವಸ್ತುಗಳನ್ನ ನೀಡದೆ ನಿರಾಕರಿಸಿ ತಮ್ಮ ಹೇಯ ಕೃತ್ಯ ಪ್ರದರ್ಶಿಸಿದ ಸವರ್ಣಿಯರ ವಿರುದ್ಧ ಕೆಲ ದಲಿತ ಕುಟುಂಬಗಳು ತೀವ್ರ ಆಕ್ರೋಶ ಹೊರಹಾಕಿವೆ .

 

 

 

ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಮದ ಮಹಿಳೆ ಕರಿಯಮ್ಮ ಮಾತನಾಡಿದ್ದು ನಮ್ಮ ಗ್ರಾಮದಲ್ಲಿ ಹಲವು ವರ್ಷಗಳಿಂದ ಅಕ್ರಮ ಮಧ್ಯ ಮಾರಾಟ ಮಾಡಲಾಗುತ್ತಿದ್ದು ಇದರಿಂದ ದೂರು ನೀಡಿದ ಹಿನ್ನೆಲೆಯಲ್ಲಿ ಯಾರೂ ಸಹ ಕ್ರಮ ಕೈಗೊಳ್ಳದೇ  ಇಂದು ಗ್ರಾಮದಲ್ಲಿನ ಹಲವು ಅಂಗಡಿಗಳಲ್ಲಿ ದಲಿತರಿಗೆ ಯಾವುದೇ ದಿನ ನಿತ್ಯ ಬಳಕೆಯ ವಸ್ತುಗಳನ್ನ ನೀಡದೆ ನಮ್ಮನ ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ತಮ್ಮ ನೋವನ್ನು ಹೊರಹಾಕಿದ್ದಾರೆ.

 

 

 

ಅದೇನೇ ಇರಲಿ ಮಾಡುತ್ತಿರುವುದು ಅಕ್ರಮ ಚಟುವಟಿಕೆಯಾದರು, ಇದರ ಬಗ್ಗೆ ದೂರು ನೀಡಿದ ಗ್ರಾಮಸ್ಥರಿಗೆ ಅದೇ ಗ್ರಾಮದ ಕೆಲ ಸವರ್ಣೀಯರು ದಲಿತರಿಗೆ ಬಹಿಷ್ಕಾರ ಹಾಕಿರುವ ಹಿನ್ನೆಲೆಯಲ್ಲಿ ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಜನಪ್ರತಿನಿಧಿಗಳು ಎಚ್ಚೆತ್ತು ಮಧ್ಯ ಮಾರಾಟಕ್ಕೆ ಬ್ರೇಕ್ ಹಾಕಿ  ದಲಿತರಿಗೆ ನ್ಯಾಯ ದೊರಕಿಸಿ ಕೊಟ್ಟು  ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡಬೇಕಾಗಿದೆ

Leave a Reply

Your email address will not be published. Required fields are marked *

You cannot copy content of this page

error: Content is protected !!