ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಾರಿಗೆ ಸಂಸ್ಥೆಯ ನೌಕರರ ಸಂಘಟನೆ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆ ರಾಜ್ಯಾದ್ಯಂತ ಪ್ರಯಾಣಿಕರು ಹೈರಾಣಾಗಿದ್ದಾರೆ.
ರಾಜ್ಯಾದ್ಯಂತ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಸಾರ್ವಜನಿಕರು ಕೆಲಸದ ನಿಮಿತ್ತ ತೆರಳುವ ಕಾರ್ಮಿಕರು, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.
ಸರ್ಕಾರ ಖಾಸಗಿ ಬಸ್ ಗಳ ಮೊರೆ ಹೋಗಿ ಖಾಸಗಿ ಬಸ್ಸು ವ್ಯವಸ್ಥೆಯನ್ನು ಮಾಡಿದರು ಸಹ ಪ್ರಯಾಣಿಕರು ಮುಖ ಮಾಡದೇ ಇರುವುದು ಸರ್ಕಾರದ ವೈಫಲ್ಯಕ್ಕೆ ಕಾರಣವೆಂದು ಹೇಳಬಹುದಾಗಿದೆ.
ಕೆಲವರು ಖಾಸಗಿ ಬಸ್ಸುಗಳನ್ನು ಹತ್ತಲು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದ್ದು. ಕೆಲ ಖಾಸಗಿ ಬಸ್ ಗಳು ದುಪ್ಪಟ್ಟು ಕೊಡಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾರೆ ಇದರಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ಇನ್ನು ಆಟೋಗಳು ಸಹ ಹೆಚ್ಚಿನ ದರಕ್ಕೆ ಬೇಡಿಕೆ ಇಡುತ್ತಿರುವುದು ಕಂಡು ಬಂದಿದೆ.
ಒಟ್ಟಾರೆಯಾಗಿ ರಾಜ್ಯದ್ಯಂತ ಪ್ರಯಾಣಿಕರ ತೊಂದರೆ ಹೇಳುತ್ತಿರದಾಗಿದೆ ಸರ್ಕಾರ ಕೂಡಲೇ ಗಮನ ಹರಿಸಿ ಉದ್ಭವಿಸಿರುವ ಸಮಸ್ಯೆಯನ್ನು ನಡೆಯಬೇಕಾಗಿದೆ . ಇಲ್ಲದಿದ್ದರೆ ಪರಿಸ್ಥಿತಿ ಹದಗೆಡುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಒಂದೆಡೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇಂತಹ ಸಮಯದಲ್ಲಿ ಮುಷ್ಕರದ ಮೊರೆ ಹೋಗಿರುವ ಸಾರಿಗೆ ನೌಕರರ ವಿರುದ್ಧ ಸಾರ್ವಜನಿಕರು ಸಹ ಬೇಸರಗೊಂಡಿದ್ದಾರೆ.
ಇನ್ನು ಮುಷ್ಕರಕ್ಕೆ ಸಂಬಂಧಪಟ್ಟಂತೆ ರಾಜ್ಯದ್ಯಂತ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು. ಸಾರಿಗೆ ನೌಕರರು ತಮ್ಮ ಪಟ್ಟು ಸಡಿಲಿಸುತ್ತಿಲ್ಲ ಸರ್ಕಾರ ನೌಕರರ ಬೇಡಿಕೆ ಈಡೇರಿಸಲು ಮನಸ್ಸು ಮಾಡುತ್ತಿಲ್ಲ ಒಟ್ಟಾರೆಯಾಗಿ ಇವರಿಬ್ಬರ ನಡುವೆ ಪ್ರಯಾಣಿಕರನ್ನು ಹೈರಾಣಾಗಿದ್ದಾರೆ ,ನೀ ಕೊಡೆ ನಾ ಬಿಡೆ ಆಟ ಇನ್ನಾದರೂ ನಿಲ್ಲುವುದೇ ,ಸರ್ಕಾರದ ಮುಂದಿನ ಹೆಜ್ಜೆ ಏನು ಎಂಬುದನ್ನ ಕಾದುನೋಡಬೇಕಾಗಿದೆ